ಟೋಲ್ ಶುಲ್ಕ ಪಾವತಿಸುವಂತೆ ಕೇಳಿದ ಮಹಿಳಾ ಆಪರೇಟರ್ ಗೆ ಥಳಿಸಿದ ವ್ಯಕ್ತಿ..
ಟೋಲ್ ಶುಲ್ಕ್ ಪಾವತಿಸುವಂತೆ ಕೇಳಿದ ಟೋಲ್ ಬೂತ್ ಮಹಿಳಾ ಆಪರೇಟರ್ ಗೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ಘಟನೆ ಮಧ್ಯಪ್ರದೇಶದ ರಾಜ್‌ಗಢ್ ಜಿಲ್ಲೆಯಲ್ಲಿ ನಡೆದಿದೆ. ಶುಲ್ಕ ಪಾವತಿಸಲು ವಿರೋಧಿಸಿರುವ ವ್ಯಕ್ತಿ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾನೆ.
ರಾಜಗಢ-ಭೋಪಾಲ್ ರಸ್ತೆಯಲ್ಲಿರುವ ಕಚ್ನಾರಿಯಾ ಟೋಲ್ ಪ್ಲಾಜಾದಲ್ಲಿ ಆಗಸ್ಟ್ 20 ರಂದು ಘಟನೆ ನಡೆದಿದ್ದು ಪ್ರಕರಣ ದಾಖಲಾದ ಬಳಿಕ ಸುದ್ದಿ ಬೆಳಕಿಗೆ ಬಂದಿದೆ.
#WATCH| Madhya Pradesh: A man slapped a female toll operator after being refused to leave without paying tax in Rajgarh
A case has been registered against the accused for the incident dated Aug 20. Soon he'll be arrested: Ramkumar Raghuvanshi, Biaora PS in-charge
(Source: CCTV) pic.twitter.com/bbdkinLPZf
— ANI MP/CG/Rajasthan (@ANI_MP_CG_RJ) August 21, 2022
ಮಹಿಳೆ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನ ರಾಜ್‌ಕುಮಾರ್ ಗುರ್ಜರ್ ಎಂದು ಗುರುತಿಸಲಾಗಿದೆ. ತಾನು ಸ್ಥಳೀಯ ವ್ಯಕ್ತಿಯಾಗಿರುವ ಕಾರಣ ಟೋಲ್ ಶುಲ್ಕ ಪಾವತಿ ಮಾಡಬೇಕಾಗಿಲ್ಲ ಎಂದು ಮಹಿಳಾ ಆಪರೇಟರ್ ಜೊತೆ ವಾದ ಮಾಡಿದ್ದಾನೆ. ಫಾಸ್ಟ್‌ಟ್ಯಾಗ್ ಇಲ್ಲದೆ ಕಾರು ಚಾಲನೆ ಮಾಡುವಾಗ ಟೋಲ್ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ ಎಂದು ವಾದ ಮಾಡಿದ್ದಾನೆ.
ಸಂತ್ರಸ್ತ ಮಹಿಳೆ ದೂರು ನೀಡಿದ ಬಳಿಕ, ಬಿಯೋರಾ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354, 323 ಮತ್ತು 506 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
Madhya Pradesh: A man slapped a female toll operator after being refused to leave without paying tax in Rajgarh