ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಮಹಾಶಿವರಾತ್ರಿ ಮಹೋತ್ಸವ

1 min read
Mahashivaratri Mahotsavam

ಜಯಕರ್ನಾಟಕ ಜನಪರ ವೇದಿಕೆವತಿಯಿಂದ ಮಹಾಶಿವರಾತ್ರಿ ಮಹೋತ್ಸವ

ಮಹಾಶಿವರಾತ್ರಿ ಅಂಗವಾಗಿ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಮಹಾಶಿವರಾತ್ರಿ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಸಮುದ್ರ ಮಂಥನದ ವೇಳೆ ಹೊರ ಬಂದ ಹಲಾಹಲವನ್ನು ಕುಡಿಯುವುದರ ಮೂಲಕ ಶಿವ, ಇಡೀ ಜಗತ್ತನ್ನ ರಕ್ಷಣೆ ಮಾಡಿ ನೀಲಕಂಠನಾದ. ಈಗ ಕೊರೊನಾ ವೈರಸ್ ಇಡೀ ಜಗತ್ತನ್ನ ತಲ್ಲಣಗೊಳಿಸಿದೆ. ಹೆಮ್ಮಾರಿ ಕೊರೊನಾದಿಂದಾಗಿ ಜನರು ನಲುಗಿಹೋಗಿದ್ದಾರೆ. ಹೀಗಾಗಿ ಈ ಕೊರೊನಾ ಎಂಬ ವಿಷವನ್ನ ನಾಶಮಾಡಿ ಲೋಕಕಲ್ಯಾಣವಾಗಬೇಕೆಂಬ ಉದ್ದೇಶದಿಂದ ರುದ್ರಯಾಗ ಮತ್ತು ಧಾರ್ಮಿಕ ಕಾರ್ಯಕ್ರಗಳನ್ನ ಜಯಕರ್ನಾಟಕ ಜನಪರ ವೇದಿಕೆವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಏರ್ಪಡಿಸಲಾಗಿದೆ.

ಈ ಮಹೋತ್ಸವವು ದಿನಾಂಕ 11 ಗುರುವಾರ, ಶಿಶು ಗೃಹ,ಪೂರ್ಣಪ್ರಜ್ಞಾ ಸಾರ್ವಜನಿಕ ಆಟದ ಮೈದಾನ, ಹೆಚ್ ಎಎಲ್, ಮೂರನೇ ಹಂತ, ನ್ಯೂ ತಿಪ್ಪಸಂದ್ರದಲ್ಲಿ ನಡೆಯಲಿದೆ.

Mahashivaratri Mahotsavam

ಗುರುವಾರ ಬೆಳಗ್ಗೆ 7.30ರಿಂದ ಮಂಗಳವಾದ್ಯ, ಚಂಡೆ ತಾಳಗಳೊಂದಿಗೆ ದೇವತಾ ಪ್ರಾರ್ಥನೆ, ಗುರು ಗಣಪತಿ ಪೂಜೆ, ಪಂಚಗವ್ಯ, ಪುಣ್ಯಹವಾಚನ, ಶಿವಲಿಂಗ ಸ್ಥಾಪನೆ, ಪ್ರಾಣ ಪ್ರತಿಷ್ಠಾಪನೆ,ಶತ ರುದ್ರಾಭಿಷೇಕ, ಕಳಶ ಪ್ರತಿಷ್ಠಾಪನೆ.
ಬೆಳಿಗ್ಗೆ 10.00ಗೆ ಮೇಕಲೆ ಹೋಮದ ಕುಂಡದಲ್ಲಿ ಅರಣಿ ಮಥನದೊಂದಿಗೆ ಅಗ್ನಿ ಜನನ, ಅದೇ ಅಗ್ನಿಯಿಂದದ ಗಣಪತಿ ಹೋಮ, ರುದ್ರಯೋಗ ಹೋಮ ಪ್ರಾರಂಭ ಮತ್ತು ಶಿವಲಿಂಗಕ್ಕೆ ಸಹಸ್ರನಾಮ ವಿನಿಯೋಗ.
ಸಂಜೆ 04 ಗಂಟೆಗೆ ಪಂಚಾಮೃತ ಅಭಿಷೇಕ, ಹಿರಿದ್ರೋದಕ ಅಭಿಷೇಕ, ಕುಂಕುಮೋದಕ ಅಭಿಷೇಕ, ಪುಷ್ಪೋದಕ ಅಭಿಷೇಕ, ರುದ್ರ ಪಾರಾಯಣ ಸಹಿತ ರುದ್ರಾಭಿಷೇಕ
ಸಂಜೆ 5.30 ಅಲಂಕಾರ ಅಷ್ಟಾವದಾನ ಸೇವೆ, ಮಂಗಳಾತಿ ತೀರ್ಥಪ್ರಸಾದ ವಿನಿಯೋಗ.
ರಾತ್ರಿ 9.0ಕ್ಕೆ ಪ್ರಥಮ ಯಾಮದ ಅಭಿಷೇಕ ಮತ್ತು ಪೂಜೆ.
ಮಧ್ಯರಾತ್ರಿ 12 ಗಂಟೆಗೆ ದ್ವಿತೀಯ ಯಾಮದ ಅಭಿಷೇಕ ಮತ್ತು ಪೂಜೆ.
ಬೆಳಗ್ಗೆ ಜಾವ 4 ಗಂಟೆಗೆ ತೃತೀಯ ಯಾಮದ ಅಭಿಷೇಕ ಮತ್ತು ಪೂಜೆ.
ಬೆಳಗ್ಗೆ 6 ಗಂಟೆಗೆ ಚತುರ್ಥ ಯಾಮದ ಅಭಿಷೇಕ ಮತ್ತು ಪೂಜೆ

ಮುಖ್ಯವಾಗಿ ಸಂಜೆ 6.30 ರಿಂದ 9 ಗಂಟೆಯವರೆಗೆ ಯಕ್ಷಗಾನ ದಕ್ಷದ್ವಾರ ಕಥಾ ಪ್ರಸಂಗ ನಡೆಯಲಿದೆ.
ರಾತ್ರಿ 9.30 ರಿಂದ 12 ರವರೆಗೆ ವಿವಿಧ ಕಲಾವಿದರಿಂದ ನೃತ್ಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮ
ಮಧ್ಯರಾತ್ರಿ 12.30 ರಿಂದ 5.30 ರವರೆಗೆ ಭಜನೆ ಮತ್ತು ಭಕ್ತಿ ಗೀತೆಗಳು.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd