ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬುಗೆ ಕೋವಿಡ್ ಪಾಸಿಟಿವ್
ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬು ಅವರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ದೃಢವಾಗಿದೆ.. ಸೋಷಿಯಲ್ ಮೀಡಿಯಾದಲ್ಲಿ ಮಹೇಶ್ ಬಾಬು ಅವರೇ ಈ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ.. ಅಭಿಮಾನಿಗಳು ಆತಂಕಗೊಂಡಿದ್ದು , ಮಹೇಶ್ ಬಾಬು ಅವರು ಬೇಗ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ..
ಈ ಬಗ್ಗೆ ಟ್ವೀಟ್ ಮಾಡಿರುವ ಮಹೇಶ್ ಬಾಬು ಅವರು , ನನ್ನ ಎಲ್ಲಾ ಅಭಿಮಾನಿಗಳಿಗೆ ಮತ್ತು ಹಿತೈಷಿಗಳಿಗೆ ನಾನು ಈ ಮೂಲಕ ಒಂದು ವಿಷಯ ತಿಳಿಸುತ್ತಿದ್ದೇನೆ. ನಾನು ಎಲ್ಲ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ಸಹ, ನನಗೆ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಮನೆಯಲ್ಲಿ ನಾನು ಪ್ರತ್ಯೇಕವಾಗಿದ್ದೇನೆ. ವೈದ್ಯಕೀಯ ಮಾರ್ಗದರ್ಶನವನ್ನು ಅನುಸರಿಸುತ್ತಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರೆಲ್ಲರೂ ಪರೀಕ್ಷೆಗೆ ಒಳಪಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ..
ಅಲ್ಲದೇ ಯಾರಾದರೂ ಕೋವಿಡ್ ಲಸಿಕೆಯನ್ನು ತೆಗೆದುಕೊಳ್ಳದೇ ಇದ್ದರೆ ತಕ್ಷಣವೇ ಪಡೆದುಕೊಳ್ಳಿ ಎಂದು ನಾನು ಒತ್ತಾಯಿಸುತ್ತೇನೆ. ಏಕೆಂದರೆ ನಾವು ಲಸಿಕೆ ಹಾಕಿಸಿಕೊಂಡರೆ ತೀವ್ರವಾದ ರೋಗಲಕ್ಷಣಗಳು ಮತ್ತು ಆಸ್ಪತ್ರೆಗೆ ದಾಖಲಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ದಯವಿಟ್ಟು ಕೋವಿಡ್ ನಿಯಮಗಳನ್ನು ಅನುಸರಿಸಿ ಮತ್ತು ಸುರಕ್ಷಿತವಾಗಿರಿ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೂ ಜೂನಿಯರ್ ಎಸ್‍ಟಿಆರ್ ಸಹ ಬೇಗ ಗುಣಮುಖರಾಗಿ ಬನ್ನಿ ಅಣ್ಣ ಎಂದು ಮಹೇಶ್ ಬಾಬು ಅವರಿಗೆ ಕಾಮೆಂಟ್ ಮಾಡಿದ್ದಾರೆ. ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಠ ಸಿನಿಮಾವನ್ನು ಈ ವರ್ಷ ಜನವರಿ 13 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ RRR ಸಿನಿಮಾಗಾಗಿ ಹಿಂದೆ ಸರಿದಿತ್ತು.. ಆದ್ರೀಗ ಕೋವಿಡ್ ಹಾವಳಿಯಿಂದ RRR ಸಿನಿಮಾವನ್ನೂ ಸಹ ಮುಂದೂಡಲಾಗಿದೆ..








