ಮೈಸೂರು : ಸಾಕಷ್ಟು ಪರ-ವಿರೋಧಕ್ಕೆ ಕಾರಣವಾಗಿರುವ ಮಹಿಷ ದಸರೆ ಆಚರಣೆಯನ್ನು ಮಾಡೇ ಮಾಡುವುದಾಗಿ ಸಾಹಿತಿ ಕೆ.ಎಸ್ ಭಗವಾನ್ ತಿಳಿಸಿದ್ದಾರೆ.
ಮಹಿಷ ದಸರೆ ಆಚರಣೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭಗವಾನ್, ಅಕ್ಟೋಬರ್ 15 ರಂದು ಚಾಮುಂಡಿಬೆಟ್ಟದಲ್ಲಿ ಮಹಿಷ ದಸರೆ ಆಚರಣೆ ನಿಶ್ಚಿತ ಎಂದು ತಿಳಿಸಿದರು.
ಮಹಿಷ ಕೆಟ್ಟ ವ್ಯಕ್ತಿಯಾಗಿದ್ದರೆ ಆತನ ಹೆಸರನ್ನು ಒಂದು ಊರಿಗೆ ಇಡುತ್ತಿರಲಿಲ್ಲ. ಅವನೊಬ್ಬ ಬೌದ್ಧ ಸನ್ಯಾಸಿ. ಅವನ ಹಬ್ಬವನ್ನು ನಾವು ಮಾಡುತ್ತೇವೆ. ಇಷ್ಟವಿದ್ದವರು ಬನ್ನಿ, ಇಲ್ಲದಿದ್ದರೆ ಸುಮ್ಮನಿರಿ ಎಂದು ಖಾರವಾಗಿ ಹೇಳಿದರು.
ಮುಂದುವರಿದು ಮಾತನಾಡಿದ ಭಗವಾನ್, ವೇಶ್ಯೆಗೆ ಹುಟ್ಟಿದವರು ಶೂದ್ರರು ಎಂದು ಆರ್ಯಧರ್ಮ ಹೇಳುತ್ತದೆ.
ಇಂತಹ ಧರ್ಮ ನಮಗೆ ಬೇಕಾಗಿಲ್ಲ. ಅಸುರ ಎಂದರೆ ಮದ್ಯಪಾನ ಮಾಡದವನು ಎಂದರ್ಥ. ಇತಿಹಾಸದ ಕುರಿತು ಸರಿಯಾಗಿ ಅರ್ಥೈಸಿಕೊಳ್ಳಿ. ಚರ್ಚೆಗೆ ಬನ್ನಿ’ ಎಂದು ಸವಾಲ್ ಎಳೆದಿದ್ದಾರೆ.
ಇನ್ನು ಈ ಸುದ್ದಿಗೋಷ್ಟಿಯಲ್ಲಿ ನಿವೃತ್ತ ಪ್ರಾಧ್ಯಾಪಕ ಮಹೇಶ್ ಚಂದ್ರಗುರು ಸೇರಿದಂತೆ ಹಲವರು ಉಪಸ್ಥಿತರಿದ್ದರು.








