ಉಡುಪಿಯಲ್ಲಿ ಪರಶುರಾಮ ಫ್ರೆಂಡ್ಸ್ (ರಿ) ಮಲ್ಪೆ ರವರು 11/01/25 ರಿಂದ 14/01/2025 ರ ವರೆಗೆ ಮಲ್ಪೆ ಬೀಚ್ ನಲ್ಲಿ ಮಲ್ಪೆ ಫುಡ್ ಫೆಸ್ಟ್ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ.ಮಲ್ಪೆ ಪುಡ್ ಫೆಸ್ಟ್ ಈಗಾಗಲೇ ಶುರುವಾಗಿ ಒಂದು ದಿನವಾಗಿದ್ದು, ಆಹಾರ ಪ್ರಿಯರಿಂದ ಅತ್ಯದ್ಭುತ ಆರಂಭ ದೊರಕಿದೆ.ಆಹಾರ ಮಳಿಗೆಗಳಲ್ಲಿ ಮೀನು ಫ್ರೈ, ಬಿರಿಯಾನಿ, ಕೋರಿರೊಟ್ಟಿ, ಕೋರಿಪುಂಡಿ,ಕೋರಿ ಸುಕ್ಕ,ಸಿಗಡಿ ಫ್ರೈ ಗೋಬಿ ಮಂಚೂರಿ, ಹೋಳಿಗೆ, ಚುರುಮುರಿ, ಮಟನ್, ಚಿಕನ್,ಜ್ಯೂಸ್, ಐಸ್ ಕ್ರೀಂ, ಸ್ವೀಟ್ಸ್, ಅಮುಲ್ ಮಿಲ್ಕ್ ಸೇರಿದಂತೆ ವಿವಿಧ ರೀತಿಯಾ ಖ್ಯಾದಗಳು ಮತ್ತು ಇತರೆ ಆಹಾರಗಳು ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ. ಜನರೂ ಎಲ್ಲಾ ಸ್ಟಾಲ್‍ಗಳಲ್ಲೂ ಕಿಕ್ಕಿರಿದು ತುಂಬಿದ್ದರು.
ಈ ಫುಡ್ ಫೆಸ್ಟ್ ಕಾರ್ಯಕ್ರಮದಲ್ಲಿ ಪ್ರತಿದಿನ ನಾನಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಕಾರ್ಯಕ್ರಮಗಳು, ಬೇರೆ ಬೇರೆ ತಂಡಗಳಿಂದ ನೃತ್ಯ ಕಾರ್ಯಕ್ರಮ, ಸಂಗೀತ ರಸಮಂಜರಿ ಕಾರ್ಯಕ್ರಮಗಳ ಜೊತೆ ಹಲವಾರು ಲೈವ್ ಕಾನ್ಸೆಪ್ಟ್ ಕೂಡ ನಡೆಯಲಿರುತ್ತದೆ.








