ದೆವ್ವಗಳ ಗ್ಯಾಂಗ್ ಕಾಟ ಕೊಡುತ್ತಿವೆ ಎಂದು ಪೊಲೀಸ್ ಠಾಣೆಗೆ ದೂರು ಕೊಟ್ಟ ವ್ಯಕ್ತಿ..!
ಗುಜರಾತ್ ನಲ್ಲಿ ತೀರಾ ವಿಚಿತ್ರವೆನಿಸುವಂತಹ ಘಟನೆಯೊಂದು ನಡೆದಿದೆ… ಹೌದು 35 ವರ್ಷದ ವರ್ಸಾಂಗ್ ಭಾಯ್ ಬಾರಿಯಾಸ್ಲೋ ಎಂಬಾತ ತನಗೆ ದೆವ್ವಗಳ ಗ್ಯಾಂಗ್ ಕಾಟ ಕೊಡ್ತಿದೆ ಎಂದು ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲು ಮಾಡಿದ್ದಾರೆ.
ಹೌದು ತನಗೆ ದೆವ್ವಗಳ ಗುಂಪು ಟಾರ್ಚರ್ ಕೊಡುತ್ತಿದೆ.. ಅಷ್ಟೇ ಅಲ್ಲದೇ ಈ ದೆವ್ವಗಳ ಪೈಕಿ 2 ದೆವ್ವಗಳು ನನ್ನನ್ನ ಕೊಲೆ ಮಾಡುವುದಾಗಿಯೂ ಬೆದರಿಕೆಯೊಡಿದ್ದು, ಜೀವ ರಕ್ಷಣೆ ನೀಡಬೇಕೆಂದು ಕೋರಿ ಪೊಲೀಸರ ಮೊರೆ ಹೋಗಿದ್ದಾನೆ. ಈತನ ಕಥೆ ಕೇಳಿ ಪೊಲೀಸರು ಕೂಡ ತಲೆ ಕೆಡಿಸಿಕೊಂಡಿದ್ದಾರೆ. ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದೆವ್ವಗಳು ಹೀಗೆ ಬಂದು ಕಾಟ ಕೊಡುತ್ತಿರುವುದಾಗಿ ದೂರಿನಲ್ಲಿ ಆತ ತಿಳಿಸಿದ್ದಾನೆ.
ಇನ್ನೂ ಪೊಲೀಸರು ಮೊದಲಿಗೆ ಆತನನ್ನು ಮಾನಸಿಕ ಅಸ್ವಸ್ಥ ಎಂದು ಭಾವಿಸಿದ್ದಾರೆ. ಆದ್ರೆ ಆತನಿಗೆ ಭವಿಷ್ಯದಲ್ಲಿ ಯಾವುದೇ ಮಾನಸಿಕ ಸಮಸ್ಯೆ ಆಗದೇ ಇರಲೆಂದು ದೂರು ದಾಖಲಿಸಿಕೊಂಡಿದ್ದಾರೆ. ಬಳಿಕ ಪೊಲೀಸರು ವರ್ಸಂಭಾಯ್ ಕುಟುಂಬದ ಸದಸ್ಯರನ್ನು ಸಂಪರ್ಕಿಸಿದಾಗ ಆತ ಕೆಲ ದಿನಗಳಿಂದ ಸೈಕಿಯಾಟ್ರಿಕ್ ಚಿಕಿತ್ಸೆ ಪಡೆಯುತ್ತಿದ್ದು, ಕಳೆದ 10 ದಿನಗಳಿಂದ ಔಷಧ ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ.