ಗಡ್ಡದಲ್ಲಿ ಯುವತಿಯನ್ನ ಎತ್ತಿದ ವೃದ್ಧ | ವಿಡಿಯೋ
ಇತ್ತೀಚೆಗಷ್ಟೇ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಗಿನ್ನಿಸ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವೃದ್ಧನೊಬ್ಬ 63 ಕೆಜಿ ತೂಕದ ಯುವತಿಯನ್ನು ಎತ್ತುತ್ತಾನೆ. ಅರ್ರೆ.. ಇದ್ರಲ್ಲಿ ಏನೀದೆ ಅಂತಾ ನೀವು ಯೋಚಿಸುತ್ತೀರಾ! ಆ ವೃದ್ಧ ಯುವತಿಯನ್ನ ಎತ್ತಿದ್ದು ಕೈಯಲ್ಲ.. ಅದೇ ಟ್ವಿಸ್ಟ್!!
ಈ ವಿಡಿಯೋದಲ್ಲಿ ಸ್ಟಂಟ್ ಮಾಡಿದ ವ್ಯಕ್ತಿಯ ಹೆಸರು ಆಂಟೋನಾಸ್ ಕಾಂಟ್ರಿಮಾಸ್. 63.80 ಕೆ.ಜಿ ತೂಕದ ಯುವತಿಯನ್ನು ತನ್ನ ಗಡ್ಡಕ್ಕೆ ಕಟ್ಟಿಕೊಂಡು ಯಾವುದೇ ಸಹಾಯವಿಲ್ಲದೇ ಮೇಲೆತ್ತುತ್ತಾನೆ. ಆಗ ಆತನ ಮುಖದ ನೋವು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಆದರೆ, ವಿಶ್ವ ದಾಖಲೆ ಮುರಿಯಲು ಆ ಸಂಕಟವನ್ನೆಲ್ಲ ಸಹಿಸಿಕೊಂಡೆ ಎನ್ನುತ್ತಾರೆ ಗಡ್ಡಧಾರಿ. ಈ ಮೂಲಕ ಗಿನ್ನೆಸ್ ಬುಕ್ ಆಫ್ ವಲ್ರ್ಡ್ ರೆಕಾಡ್ರ್ಸ್ ನಲ್ಲಿ ಆತ ಸ್ಥಾನ ಪಡೆದಿದ್ದಾರೆ.
ಸದ್ಯ ಈ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆ ಮತ್ತು ಕಾಮೆಂಟ್‍ಗಳು ಬಂದಿವೆ. ಇದು ನಿಜಕ್ಕೂ ಅದ್ಭುತ, ವಿಭಿನ್ನ ಪ್ರತಿಭೆ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.