ನೋಕಿಯಾ ಮೊಬೈಲ್ ನುಂಗಿದ್ದ ಭೂಪ – ಶಸ್ತ್ರ ಚಿಕಿತ್ಸೆಯಲ್ಲಿ ಮೊಬೈಲ್ ಹೊರತೆಗೆದ ವೈದ್ಯರು..!

1 min read

ಇಡೀ ನೋಕಿಯಾ ಮೊಬೈಲ್ ನುಂಗಿದ್ದ ಭೂಪ – ಶಸ್ತ್ರ ಚಿಕಿತ್ಸೆಯಲ್ಲಿ ಮೊಬೈಲ್ ಹೊರತೆಗೆದ ವೈದ್ಯರು..!

ನೋಕಿಯಾ 3310 ಸೆಲ್ ಫೋನ್ ನುಂಗಿದ್ದ ವ್ಯಕ್ತಿಯೊಬ್ಬ ಇದೀಗ ತನ್ನ ಜೀವ ಉಳಿಸಿಕೊಳ್ಳುವುದಕ್ಕಾಗಿ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದು, ಶಸ್ತ್ರ ಚಿಕಿತ್ಸೆಯು ಯಶಸ್ವಿಯಾಗಿದೆ.

ಕೊಸೊವೊದ ಪ್ರಿಸ್ಟಿನಾದ 33 ವರ್ಷದ ಈ ವ್ಯಕ್ತಿಯು ಫಿನ್ನಿಷ್ ಕಂಪನಿಯು ತಯಾರಿಸಿದ 2000 ರ ದಶಕದ ಆರಂಭದ ಮಾದರಿಯ ನೋಕಿಯೋ ಮೊಬೈಲ್ ಅನ್ನೇ ನುಂಗಿಬಿಟ್ಟಿದ್ದರು.

2000 ನೇ ಇಸವಿಯಲ್ಲಿ ಬಿಡುಗಡೆಯಾಗಿದ್ದ ನೋಕಿಯಾ ಫೋನಿನ ಈ ಮಾದರಿಯು ‘ಇಟ್ಟಿಗೆ’ ಫೋನ್ ಎಂದೇ ಜನಪ್ರಿಯವಾಗಿತ್ತು. ಮೊಬೈಲ್ ನುಂಗಿನ ನಂತರ ಆ ವ್ಯಕ್ತಿಯನ್ನ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಬಳಿಕ ಆತನ ದೇಹದಿಂದ ಮೊಬೈಲ್ ತೆಗೆಯುವ ಜವಬ್ದಾರಿಯನ್ನ ಡಾ ಸ್ಕೆಂದರ್ ವಹಿಸಿಕೊಂಡಿದ್ದರು.

ಆ ವ್ಯಕ್ತಿ ಸ್ಕ್ಯಾನ್ ಮತ್ತು ಪರೀಕ್ಷೆಗಳಿಗೆ ಒಳಗಾದಾಗ, ಫೋನ್ ‘ಜೀರ್ಣಿಸಿಕೊಳ್ಳಲು ಸಾಧ್ಯವಾಗದಷ್ಟು ದೊಡ್ಡದಾಗಿದೆ’ ಮತ್ತು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುವ ನಾಶಕಾರಿ ಬ್ಯಾಟರಿಯಿಂದಾಗಿ ಆತನ ಜೀವಕ್ಕೆ ಅಪಾಯವಿದೆ ಎಂದು ವೈದ್ಯರು ತಿಳಿಸಿದ್ದರು.

ಅದೃಷ್ಟವಶಾತ್ ಆ ವ್ಯಕ್ತಿಗೆ,  ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆದಿದ್ದು ಹೊಟ್ಟೆಯಿಂದ ಮೊಬೈಲ್ ಹೊರತೆಗಗೆಯಲಾಗಿದೆ.

ಸ್ಮಾರ್ಟ್ ಫೋನ್ ಬಳಕೆದಾರರೇ ಎಚ್ಚರ..ಎಚ್ಚರ..!

ಕಾರ್ಯಾಚರಣೆಯ ನಂತರ, ಡಾ. ಟೆಲ್ಜಾಕು ಅವರು ಫೋನಿನ ಫೋಟೋಗಳನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದು, ಈ ಸುದ್ದಿ ವೈರಲ್ ಆಗ್ತಿದ್ದು, ನೆಟ್ಟಿಗರನ್ನ ದಂಗಾಗಿಸಿದೆ.

ಅಲ್ಲದೇ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಡಾ ಸ್ಕೆಂದರ್ ತಲಾಕು ಅವರು ಫೋನ್ ನುಂಗಿದ ರೋಗಿಯ ಬಗ್ಗೆ ಕರೆ ಬಂದ ತಕ್ಷಣ ನಾವು ಹೋಗಿ ಅವರ ಸ್ಕಾನಿಂಗ್ ಮಾಡಿದಾಗ ಫೋನ್ 3 ಭಾಗಗಳಾಗಿ ವಿಂಗಡಣೆಯಾಗಿದ್ದು ಗೊತ್ತಾಯಿತು.

ಎಲ್ಲಾ ಭಾಗಗಳಲ್ಲಿ, ಬ್ಯಾಟರಿಯು ಹರಡುವ ಸಾಧ್ಯತೆ ಇದ್ದು, ಅದು ಜೀವಕ್ಕೆ ಹೆಚ್ಚು ಅಪಾಯಕಾರಿಯಾಗಿತ್ತು.

ಅಷ್ಟೇ ಅಲ್ಲದೇ ಮನುಷ್ಯ ದೇಹದೊಳಗೆ ಸ್ಪೋಟಗೊಳ್ಳುವ ಸಾಧ್ಯತೆಯೂ ಇರುತ್ತದೆ. ಸದ್ಯ ಇದೀಗ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ ಎಂದು ತಿಳಿಸಿದ್ರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd