ಮಂಗಳೂರು ವಿಮಾನ ನಿಲ್ದಾಣ- ಇಬ್ಬರು ಪ್ರಯಾಣಿಕರಿಂದ 61.02 ಲಕ್ಷ ರೂ ಮೌಲ್ಯದ ಚಿನ್ನ ವಶ

1 min read
seize gold

ಮಂಗಳೂರು ವಿಮಾನ ನಿಲ್ದಾಣ- ಇಬ್ಬರು ಪ್ರಯಾಣಿಕರಿಂದ 61.02 ಲಕ್ಷ ರೂ ಮೌಲ್ಯದ ಚಿನ್ನ ವಶ

ಮಂಗಳೂರು, ಫೆಬ್ರವರಿ26: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಇಬ್ಬರು ಪ್ರಯಾಣಿಕರಿಂದ ಕಳ್ಳಸಾಗಣೆ ಮಾಡುತ್ತಿದ್ದ 61.02 ಲಕ್ಷ ರೂ ಮೌಲ್ಯದ ಒಂದು ಕಿಲೋ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಪೆನ್ನುಗಳು ಮತ್ತು ಎಮರ್ಜೆನ್ಸಿ ‌ಲೈಟ್ ಬ್ಯಾಟರಿಗಳಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದ್ದ, ವಶಪಡಿಸಿಕೊಂಡ ಚಿನ್ನದ ನಿವ್ವಳ ತೂಕ 1.267 ಕೆಜಿ ಆಗಿದೆ.
seize gold

ಮೊದಲ ಪ್ರಕರಣದಲ್ಲಿ, ಫೆಬ್ರವರಿ 23 ರಂದು ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿನ ಶೌಚಾಲಯಗಳ ಬಳಿ ಕಾಸರಗೋಡಿನ ಪೈವಾಲಿಕ್ ಮೂಲದ ಅಬ್ದುಲ್ ರಶೀದ್ ನನ್ನು ಬಂಧಿಸಲಾಗಿದೆ. ಘನ ಅಂಟು ಬೆರೆಸಿದ ಮೂರು ಅಂಡಾಕಾರದ ಆಕಾರದ ಪ್ಯಾಕೆಟ್ ನಲ್ಲಿ ಚಿನ್ನವನ್ನು ಪುಡಿ ರೂಪದಲ್ಲಿ ಕಳ್ಳಸಾಗಣೆ ಮಾಡಲು ಆತ ಯತ್ನಿಸಿದ್ದ ಎಂದು ಹೇಳಲಾಗಿದೆ. ಪ್ಯಾಂಟ್ ನಲ್ಲಿ ನೀಲಿ ಕಲರ್ ಟೇಪ್ ನೊಂದಿಗೆ ಸುತ್ತಿದ ಪಾರದರ್ಶಕ ಪ್ಲಾಸ್ಟಿಕ್ ಕವರ್ ನಲ್ಲಿ ಅದನ್ನು ಇರಿಸಲಾಗಿತ್ತು. ಚಿನ್ನದ ಒಟ್ಟು ತೂಕ 825 ಗ್ರಾಂ ಮತ್ತು ನಿವ್ವಳ ತೂಕ 638 ಗ್ರಾಂ ಆಗಿದ್ದು, ಅದರ ಮೌಲ್ಯವು 30,75,160 ರೂ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಆರೋಪಿಯನ್ನು 14 ದಿನಗಳ ಕಸ್ಟಡಿಗೆ ವಿಧಿಸಲಾಗಿದೆ.
seize gold

ದುಬೈನಿಂದ ಆಗಮಿಸಿದ ಕಾಸರಗೋಡು ಮೂಲದ ಮತ್ತೊಬ್ಬ ಪ್ರಯಾಣಿಕ ಅಬ್ದುಲ್ ನಿಸ್ಸಾದ್ ಮೂಸಾ, ಪೆನ್ನುಗಳ ಒಳಗೆ ಮತ್ತು ಎಮರ್ಜೆನ್ಸಿ ‌ಲೈಟ್ ಬ್ಯಾಟರಿಯಲ್ಲಿ ಚಿನ್ನವನ್ನು ಅಡಗಿಸಿಟ್ಟಿದ್ದು, ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿದೆ. ವಶಪಡಿಸಿಕೊಂಡ ಚಿನ್ನದ ನಿವ್ವಳ ತೂಕ 629.3 ಗ್ರಾಂ ಮತ್ತು ನಿವ್ವಳ ಮೌಲ್ಯ 30,26,933 ರೂ ಆಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd