‘ಬಿಟ್​ ಬಂದ್​ ಹಳ್ಳಿಯಿಂದ ಬಿಟ್ಯಾಕ್​ ಬಂದೆ’ ಎನ್ನುತ್ತಿರೋದ್ಯಾಕೆ ಮಂಗ್ಲಿ..!

1 min read
Mangly

‘ಬಿಟ್​ ಬಂದ್​ ಹಳ್ಳಿಯಿಂದ ಬಿಟ್ಯಾಕ್​ ಬಂದೆ’ ಎನ್ನುತ್ತಿರೋದ್ಯಾಕೆ ಮಂಗ್ಲಿ..!

ರಾಬರ್ಟ್ ಸಿನಿಮಾದ ಕಣ್ಣಾ ಹೊಡಿಯಾಕ ಸಾಂಗ್ ಹಿಟ್ ಆಯ್ತೋ ಇಲ್ವೋ ಗೊತ್ತಿಲ್ಲ.. ಆದ್ರೆ ಇದೇ ಹಾಡಿನ ತೆಲುಗು ವರ್ಷನ್ ಮಾತ್ರ ಸೂಪರ್ ಹಿಟ್ ಆಗೋಯ್ತು.. ತೆಲುಗಿನಲ್ಲಿ ಮಂಗ್ಲಿ ಧ್ವನಿ ಜಾದು ಮಾಡಿತ್ತು. ಯಾರ ಬಾಯಲ್ಲಿ ನೋಡು ಕಣ್ಣೇ ಅದಿರಿಂದಿ ಹಾಡೇ.. ಜಾನಪದ ಸೊಗಡು, ವಿಭಿನ್ನ ಧ್ವನಿಯಿಂದಲೇ ಸೆನ್ಸೇಷನಲ್ ಸಿಂಗರ್ ಆಗಿ ಗುರುತಿಸಿಕೊಂಡ ಮಂಗಗ್ಲಿ ಈಗ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ತೆಲುಗು ವರ್ಷನ್ ಹಾಡು ಸೂಪರ್ ಹಿಟ್ ಆಗ್ತಿದ್ದಂತೆ ಮಂಗ್ಲಿ ಕನ್ನಡಿಗರಲ್ಲೂ ಚಿರಪರಿಚಿತರಾದ್ರೂ. ಕೆಲವೇ ಟೈಮ್ ನಲ್ಲಿ ಸಖತ್ ಹಿಟ್ ಆಗಿ ಮಿಂಚಿದ್ದರು. ಮಂಗ್ಲಿ ಅಭಿಮಾನಿಗಳ ಸಂಖ್ಯೆಯೂ ಏರಿಕೆ ಆಗಿದೆ.

ಇತ್ತ ಮಂಗ್ಲಿ ಕನ್ನಡದಲ್ಲಿ ಹಾಡು ಹಾಡಬೇಕೆಂಬ ಇಂಗಿತವನ್ನ ಕನ್ನಡಾಭಿಮಾನಿಗಳು ವ್ಯಕ್ತಪಡಿಸಿದ್ರು. ಇದೀಗ ಅವರ ಆಸೆಯೂ ಈಡೇರುವ ಕಾಲ ಹತ್ರ ಬಂದಿದೆ.  ಯಾಕಂದ್ರೆ ಮಂಗ್ಲಿ ಕನ್ನಡದ ಹಾಡನ್ನ ಹಾಡಿದ್ದಾರೆ. ಬೇಗನೇ ರಿಲೀಸ್ ಕೂಡ ಆಗಲಿದೆ.

ಹಾಗಾದ್ರೆ ಯಾವ ಹಾಡು ಅದು ಸಿನಿಮಾಗಾಗಿ ಹಾಡುತ್ತಿದ್ರೆ ಯಾವ ಸಿನಿಮಾ… ಅಥವ ಆಲ್ಬಂ ಸಾಂಗ್ ಆ.. ಅನ್ನೋ ಕ್ಯೂರಿಯಾಸಿಟಿ ಕೂಡ ಇದ್ದು, ಇದಕ್ಕೆಲ್ಲ ಉತ್ತರವೂ ಸಿಕ್ಕಿದೆ.

ಅಂದ್ಹಾಗೆ ‘ಕರಿಯಾ ಐ ಲವ್​ ಯೂ’ ಎಂಬ ಸಿನಿಮಾದ ಒಂದು ಹಾಡಿಗೆ ಮಂಗ್ಲಿ ಧ್ಬನಿಯಾಗಿದ್ದಾರೆ. ‘ಬಿಟ್​ ಬಂದ್​ ಹಳ್ಳಿಯಿಂದ ಬಿಟ್ಯಾಕ್​ ಬಂದೆ’ ಎಂಬ ಹಾಡನ್ನ ಹಾಡಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಹಾಡಿನ ರೆಕಾರ್ಡಿಂಗ್​ ನಡೆದಿದೆ. ಶೀಘ್ರವೇ ರಿಲೀಸ್ ಆಗಲಿದೆ.  ಲೋಕೇಶ್ ಅವರು​ ‘ಕರಿಯಾ ಐ ಲವ್​ ಯೂ’ ಸಿನಿಮಾಗೆ ಸಂಗೀತ ಸಂಯೋಜಿಸಿದ್ದಾರೆ.

ನಂದಕಿಶೋರ್ ಸಾರಥ್ಯದ ಸಿನಿಮಾದಲ್ಲಿ ಶಿವಣ್ಣನ ಜೊತೆ ನಿಖಿಲ್..!

ನಾನು ಬೆಸ್ಟ್ ಪ್ಲೇಯರ್..ನನ್ನ ಹೆಸರು ಚಿರಪರಿಚಿತ… ಹಾಗಿದ್ರೆ ನನ್ನ ಹೆಸರೇನು..?

ನಂದಕಿಶೋರ್ ಸಾರಥ್ಯದ ಸಿನಿಮಾದಲ್ಲಿ ಶಿವಣ್ಣನ ಜೊತೆ ನಿಖಿಲ್..!

ಯುವರತ್ನ ಸಿನಿಮಾ ನೋಡಿ ಆ ಮಾತು ಹೇಳಿದ್ದೇಕೆ ರಕ್ಷಿತ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd