Manglore Blast case – ವಿದೇಶದಿಂದ ಶಾರೀಕ್ ಗೆ ಲಕ್ಷ – ಲಕ್ಷ ಹಣ
ಇಡೀ ರಾಜ್ಯದಲ್ಲೇ ತಲ್ಲಣ ಸೃಷ್ಟಿಸಿರುವ ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.. ಮಂಗಳೂರೊನ ಪ್ರಕರಣದಲ್ಲಿ ಬೆಂಗಳೂರರಿಗೂ ಲಿಂಕ್ ಇರುವುದು ಗೊತ್ತಾಗಿದೆ..
ಬೆಂಗಳೂರು ಮೂಲಕ ರಹುಲ್ಲಾನನ್ನ ಬಂಧಿಸಲಾಗಿದೆ.. ಅಲ್ಲದೇ ಇವರ ಉದ್ದೇಶ ಭಾರತವನ್ನ ಇಸ್ಲಾಂ ರಾಷ್ಟ್ರ ಮಾಡುವುದು ಎಂಬ ಆಘಾತಕಾರಿ ವಿಚಾರವೂ ಗೊತ್ತಾಗಿದೆ..
ಅಂದ್ಹಾಗೆ ಶಾರಿಕ್ ಸಹೋದರಿಯರ ಖಾತೆಗೆ ಲಕ್ಷಾನುಗಟ್ಟಲೆ ಹಣ ಹರಿದುಬಂದಿದೆಎನ್ನಲಾಗಿದೆ.. ಅದೂ ಕೂಡ ವಿದೇಶದಿಂದ ಎನ್ನಲಾಗ್ತಿದ್ದು , ಈ ಪ್ರಕರಣ ಅಂತರಾಷ್ಟ್ರೀಯ ಮಟ್ಟದಲ್ಲಿ ಲಿಂಕ್ ಹೊಂದಿರುವ ಶಂಕೆ ಇದೆ..
ಭಾರತವನ್ನು ವಿದೇಶದಿಂದ ಕಾಣದ ಕೆಟ್ಟ ಕೈಗಳು ಟಾರ್ಗೆಟ್ ಮಾಡಿ ಫಂಡಿಂಗ್ ಮಾಡ್ತಿರುವ ಅನುಮಾನ ಹುಟ್ಟಿದೆ.. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ..