ಕೊರೊನಾ ವಾರಿಯರ್ಸ್‍ಗೆ ಊಟ ವಿತರಣೆಗೆ ಮುಂದಾದ ಸಂಜೀವ್ ಕಪೂರ್
ಮುಂಬೈ: ದೇಶದಲ್ಲಿ ಕೊರೊನಾಗೆ ಲೆಕ್ಕವಿಲ್ಲದಷ್ಟು ಮಂದಿ ಬಲಿಯಾಗ್ತಿದ್ದಾರೆ. ಅದೆಷ್ಟೋ ಜನರು ತಮ್ಮವರನ್ನ ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಸಿನಿ ತಾರಯರು ಸಹ ತಮ್ಮರನ್ನ ಕಳೆದುಕೊಂಡು ನೋವನ್ನ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅನೇಕ ಸಿನಿಮಾ ತಾರೆಯರು , ವಿವಿಧ ಕ್ಷೇತ್ರದ ಗಣ್ಯರು , ಉದ್ಯಮಿಗಳು ಜನರಿಗೆ ಸಹಾಯ ಮಾಡ್ತಿದ್ದಾರೆ. ಇದೀಗ ಮಾಸ್ಟರ್ ಶೆಫ್ ಸಂಜೀವ್ ಕಪೂರ್ ಅವರು ಕೊರೊನಾ ವಾರಿಯರ್ಸ್ ಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಹೌದು.. ಸಂಜೀವ್ ಕಪೂರ್ ಅವರು ಮುಂಬೈನ ಕೂಪರ್ ಆಸ್ಪತ್ರೆ ಮತ್ತು ಸಿಯಾನ್ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿಗೆ ಉಚಿತವಾಗಿ ಊಟ ಒದಗಿಸಲು ವಲ್ರ್ಡ್ ಸೆಂಟ್ರಲ್ ಕಿಚನ್ ಮತ್ತು ತಾಜ್ ಹೋಟೆಲ್ ಜೊತೆ ಕೈ ಜೋಡಿಸಿರುವುದಾಗಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮುಂಬೈನ ಕೂಪರ್ ಆಸ್ಪತ್ರೆ ಮತ್ತು ಸಿಯಾನ್ ಆಸ್ಪತ್ರೆಯಲ್ಲಿರುವ ಆರೋಗ್ಯ ಸಿಬ್ಬಂದಿಗೆ ಊಟ ಒದಗಿಸಲು @ವೀ ಕಿಚನ್ ಮತ್ತು ತಾಜ್ ಹೋಟೆಲ್ ಜೊತೆ ನಾವು ಸೇರಿಕೊಂಡಿದ್ದೇವೆ. ನಾವು ಶೀಘ್ರವೇ ಇದನ್ನು ಅಹಮದಾಬಾದ್‍ಗೂ ವಿಸ್ತರಿಸಲಿದ್ದೇವೆ ಮತ್ತು ದೆಹಲಿಗೂ ಕಳುಹಿಸಲು ಸಿದ್ಧವಿದ್ದೇವೆ. ದಣಿದವರಿಗಾಗಿ ಕೆಲಸ ಮಾಡುತ್ತಿರುವ ಎಲ್ಲಾ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ಧನ್ಯವಾದ. ಜೊತೆಗೆ ನಾವೆಲ್ಲರೂ ಸಹ ನಮ್ಮ ಪಾತ್ರ ನಿಭಾಯಿಸೋಣ. ಮನೆಯಲ್ಲಿಯೇ ಇರೋಣ ಮತ್ತು ಮಾಸ್ಕ್‌ನನ್ನು ಸರಿಯಾಗಿ ಧರಿಸೋಣ. ಒಟ್ಟಾಗಿ ಇದನ್ನು ಜಯಿಸೋಣ ಎಂದು ಸಂಜೀವ್ ಕಪೂರ್ ಕ್ಯಾಪ್ಷನ್ ಹಾಕಿಕೊಳ್ಳುವ ಮೂಲಕ ಬಾಣಸಿಗರು ಅಡುಗೆ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
https://www.instagram.com/p/COXFUjblN77/?utm_source=ig_embed








