Mayavathi
ಬಿಜೆಪಿಯೊಂದಿಗೆ ಬಿಎಸ್ಪಿ ಮೈತ್ರಿ ಎಂದಿಗೂ ಸಾಧ್ಯವೇ ಇಲ್ಲ ಎಂದು ಮುಖ್ಯಸ್ಥೆ ಮಾಯಾವತಿ ಅವರು ಕಡ್ಡಿಮುರಿದ ಹಾಗೆ ಹೇಳಿದ್ದಾರೆ. ಅಲ್ಲದೇ ಬಿಜೆಪಿ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಸಿರುವ ಅವರು ಬಿಜೆಪಿಯನ್ನು ಕೋಮುವಾದಿ ಮತ್ತು ಜಾತಿವಾದಿ ಎಂದು ಕಿಡಿಕಾರಿದ್ದಾರೆ. ಇನ್ನೂ ಬಿಜೆಪಿಯೊಂದಿಗೆ ಕೈ ಜೋಡಿಸುವುದಕ್ಕಿಂತ ರಾಜಕೀಯದಿಂದಲೇ ನಿವೃತ್ತಿ ಪಡೆಯುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತೊಪಡಿಸಿದ್ದಾರೆ.
ಇನ್ನೂ ಇತ್ತೇಚೆಗಷ್ಟೇ ಸಮಾಜವಾದಿ ಪಕ್ಷವನ್ನ ಸೋಲಿಸಲು ಬಿಎಸ್ ಪಿ, ಬಿಜೆಪಿ ಅಥವಾ ಇನ್ಯಾವುದೇ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಲು ಸಿದ್ಧವಿದೆ ಎಂದು ಮಾಯಾವತಿ ಹೇಳಿದ್ದರು. ಈ ಹಿನ್ನೆಲೆ ಬಿಜೆಪಿ ಜೊತೆಗೆ ಬಿಎಸ್ ಪಿ ಕೈ ಜೋಡಿಸಲಿದ್ಯಾ ಎಂಬ ನಾನಾ ಚರ್ಚೆಗಳು ಆರಂಭವಾಗಿದ್ದವು. ಆದರೆ ಇವಕ್ಕೆಲ್ಲಾ ಮಾಯಾವತಿ ಇಂದು ಉತ್ತರ ನೀಡಿದ್ದಾರೆ.
ಭೀಮಾ ತೀರದ ಮಹಾದೇವ ಭೈರಗೊಂಡ ಮೇಲೆ ಗುಂಡಿನ ದಾಳಿ
ಬಿಜೆಪಿ ಜೊತೆಗೆ ಮೈತ್ರಿ ಸಾಧ್ಯವೇ ಇಲ್ಲ ಎಂದು ತಿಳಿಸಿರುವ ಮಾಯಾವತಿ ಅವರು ಈಗ ಅಥವಾ ಭವಿಷ್ಯದಲ್ಲಿ ಯಾವುದೇ ಚುನಾವಣೆಯಲ್ಲೂ ಬಿಎಸ್ಪಿ-ಬಿಜೆಪಿ ಮೈತ್ರಿ ಸಾಧ್ಯವೇ ಇಲ್ಲ. ನಾವು ಕೋಮುವಾದಿ ಪಕ್ಷದೊಂದಿಗೆ ಹೊಂದಿಕೊಂಡು ಚುನಾವಣೆ ಎದುರಿಸಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಅಷ್ಟೇ ಅಲ್ದೇ ಎಲ್ಲ ಧರ್ಮ, ಜಾತಿಯ ಪ್ರತಿಯೊಬ್ಬರಿಗೂ ಅನುಕೂಲ ಕಲ್ಪಿಸಿಕೊಡುವುದು ನಮ್ಮ ಸಿದ್ಧಾಂತ. ಆದರೆ ಬಿಜೆಪಿಯದ್ದು ಜಾತಿವಾದ, ಬಂಡವಾಳಶಾಹಿ, ಕೋಮುವಾದ ಸಿದ್ಧಾಂತ ಎಂದು ಕಿಡಿಕಾರಿದ್ದಾರೆ. ಈ ಮೂಲಕ ಪ್ರತಿಪಕ್ಷಗಳ ಆರೋಪ ಊಹಾಪೋಹಗಳಿಗೂ ತೆರೆ ಬಿದ್ದಂತಾಗಿದೆ.
Mayavathi
ಆರ್ ಸಿಬಿ ಗೆಲುವಿಗಾಗಿ ರಾಯಚೂರಿನಲ್ಲಿ ರುದ್ರಾಭಿಷೇಕ
#ಉತ್ತರಕೊಡಿ_ಬಿಎಸ್‌ವೈ, ಪರಿಹಾರ ಕೇಳಲೂ ನಿಮಗೆ ಭಯನಾ : ಸಿದ್ದರಾಮಯ್ಯ
ಉಮಾಶ್ರೀ ಬಾಗಲಕೋಟೆ ಮನೆಗೆ ಕನ್ನ ಹಾಕಿದ ಖದೀಮರು..!
ವಿಜಯೇಂದ್ರ ಪಕ್ಷದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಬೇಕು : ಬಿ.ಶ್ರೀರಾಮುಲು
ತಾಳಿ ಕಟ್ಟುವ ಶುಭ ವೇಳೆ.. ಕಾದಿತ್ತು ವರನಿಗೆ ಬಿಗ್ ಶಾಕ್..
ನವೆಂಬರ್ ಒಂದರಿಂದ ಬ್ಯಾಂಕುಗಳಲ್ಲಿ ಬದಲಾದ ಹೊಸ ನಿಯಮಗಳ ಪಟ್ಟಿ
ಮಂಗಳೂರು ಏರ್‌ಪೋರ್ಟ್ ಇನ್ನು ಅದಾನಿ ಮಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel