ಸೌದಿ ಅರೇಬಿಯಾ ಸರಕಾರ ಕೊರೋನಾ ವೈರಸ್ ನ ಭೀತಿಯಿಂದಾಗಿ ಇದೀಗ ಮೆಕ್ಕಾ ಯಾತ್ರೆ ಕೈಗೊಳ್ಳುವುದನ್ನು ಅಲ್ಲಿನ ನಿವಾಸಿಗಳಿಗೆ ಕೂಡ ನಿಷೇಧಿಸಿದೆ.
ಬುಧವಾರ ಸರ್ಕಾರಿ ಸೌದಿ ಪ್ರೆಸ್ ಏಜೆನ್ಸಿಯಲ್ಲಿ ಈ ಪ್ರಕಟಣೆ ಬಂದಿದ್ದು, ಹೆಸರನ್ನು ಹೇಳಬಯಸದ ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ನಿಷೇಧವನ್ನು ಘೋಷಿಸಿದ್ದಾರೆ. ನಿಷೇಧ ಎಷ್ಟು ಕಾಲ ಎಂದು ಯಾವುದೇ ಸಮಯದ ಚೌಕಟ್ಟನ್ನು ನೀಡಿಲ್ಲ.
ಕಳೆದ ವಾರ, ಸೌದಿ ಅರೇಬಿಯಾವು ಕೊರೋನ ವೈರಸ್ ಮೇಲಿನ ಭೀತಿಯಿಂದ ವಿದೇಶಿ ಯಾತ್ರಿಕರಿಗೆ ಮೆಕ್ಕಾ ಮದೀನಾ ಯಾತ್ರೆಯನ್ನು ನಿಷೇಧಿಸಿತ್ತು. ಇದರಿಂದ ಸಾವಿರಾರು ಮುಸ್ಲಿಮರ ಪವಿತ್ರ ಯಾತ್ರೆ ರದ್ದಾಗಿತ್ತು.
ಈ ವರ್ಷದ ಕೊನೆ ರಂಜಾನ್ ಉಪವಾಸದ ತಿಂಗಳಾಗಿದ್ದು, ಹಜ್ ಯಾತ್ರೆ ಕೈಗೊಳ್ಳುವ ಲಕ್ಷಾಂತರ ಜನರ ಮೇಲೆ ನಿಷೇಧ ಪರಿಣಾಮ ಬೀರುವ ಸಾಧ್ಯತೆ ಇದೆ.
ಸಿರಿಯಾದಲ್ಲಿ ಬದಲಾವಣೆಯ ಅಲೆ: ಐಸಿಸ್ ವಿರುದ್ಧ ಅಮೆರಿಕಾದ ವೈಮಾನಿಕ ದಾಳಿ
ಸಿರಿಯಾದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದ್ದ ಆಂತರಿಕ ಸಂಘರ್ಷ, ಅಂತಿಮವಾಗಿ ಹೊಸ ತಿರುವು ಪಡೆದುಕೊಂಡಿದೆ. ಸರ್ವಾಧಿಕಾರಿ ಬಶರ್ ಅಲ್ ಅಸ್ಸಾದ್ ಅವರನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ಎದುರಿಸುತ್ತಿದ್ದ ವಿರೋಧಿ...