ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಗಸ್ತು ನಡೆಸುವ ಸೇನಾ ಹೆಲಿಕಾಪ್ಟರ್ ನಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಕಲ್ಪಿಸಲು ನಿರ್ಧರಿಸಲಾಗಿದೆ. ಮಿನಿ ಆಸ್ಪತ್ರೆಯಂಥ ಸೌಲಭ್ಯದ ವ್ಯವಸ್ಥೆ ಸೇನಾ ಹೆಲಿಕಾಪ್ಟರ್ ನಲ್ಲಿ ಇರಲಿದ್ದು, ಇದರಿಂದ ತಕ್ಷಣದ ಚಿಕಿತ್ಸೆ ನೀಡಲು ಸಹಾಯವಾಗಲಿದೆ. ಇಂತಹ ಹೆಲಿಕಾಪ್ಟರ್ ಗಳ ನಿರ್ವಹಣೆಗಾಗಿ ವಿಶೇಷ ವೈದ್ಯರ ಮತ್ತು ಸಹಾಯಕರ ತಂಡವನ್ನು ನೇಮಿಸಲಾಗಿದೆ. ಛತ್ತೀಸ್ ಗಡದ ಜಗದಲ್ಪರದ ಸಿ.ಆರ್.ಪಿ.ಎಫ್ ಶಿಬಿರದಲ್ಲಿ ಇವರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಸೇನಾಧಿಕಾರಿ ತಿಳಿಸಿದ್ದಾರೆ.
ನಕ್ಸಲ್ ದಾಳಿಗಳಲ್ಲಿ ಗಾಯಗೊಂಡವರಿಗೆ, ಕಾರ್ಯಚರಣೆ ವೇಳೆ ಅಸ್ವಸ್ಥರಾದವರಿಗೆ ಹಾಗೂ ಅಗತ್ಯ ಸಂಧರ್ಭದಲ್ಲಿ ತುರ್ತು ಮತ್ತು ತ್ವರಿತ ಚಿಕಿತ್ಸೆಗೆ ಇದು ಸಹಾಯವಾಗಲಿದೆ ಎಂದು ಸಿ.ಆರ್.ಪಿ.ಎಫ್ ಮುಖ್ಯಸ್ಥರಾದ ಎ.ಪಿ.ಮಹೇಶ್ವರಿ ತಿಳಿಸಿದ್ದಾರೆ.
ನೈಸ್ ಸಂಸ್ಥೆಯ ಟೋಲ್ ದಗಾಬಾಜಿಗೆ ಬ್ರೇಕ್ ಹಾಕಿ: ಡಿಕೆಶಿ ಸರ್ಕಾರಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಒತ್ತಾಯ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿರುವ ನೈಸ್ ರಸ್ತೆಯಲ್ಲಿ (BMICP) ಯಾವುದೇ ನಿಯಮಾವಳಿಗಳಿಲ್ಲದೆ ಅನಧಿಕೃತವಾಗಿ ಸಂಗ್ರಹಿಸುತ್ತಿರುವ ಟೋಲ್ ವಸೂಲಿಯನ್ನು ತಕ್ಷಣವೇ ಜಾರಿಗೆ ಬರುವಂತೆ ನಿಷೇಧಿಸಬೇಕು ಎಂದು ಕೇಂದ್ರ ಸಚಿವ...








