ಇನ್ನು ಮುಂದೆ ಯಾರು ಬೇಕಾದರೂ ಮೆಟಾ ಬ್ಲೂ ಟಿಕ್ ಪಡೆಯಬಹುದು. ಮೆಟಾ ವೆರಿಫೈಡ್ ಸೇವೆಯು ಭಾರತದಲ್ಲಿ Instagram ಅಥವಾ Facebook ನಲ್ಲಿ ಖರೀದಿಸಲು ಲಭ್ಯವಿದೆ ಎಂದು ಕಂಪನಿ ಹೇಳಿದ್ದು, ತಿಂಗಳಿಗೆ 699 ರೂ ದರದಲ್ಲಿ ಪಡೆಯಬಹುದು. ತಿಂಗಳಿಗೆ 599 ರೂ ದರದಲ್ಲಿ ವೆಬ್ ಆವೃತ್ತಿಯ ಆಯ್ಕೆಯನ್ನು ಸಹ ಪರಿಚಯಿಸುತ್ತೇವೆ ಎಂದು ಕಂಪನಿ ಹೇಳಿದೆ.
ವೆರಿಫೈಡ್ ಆದ ಖಾತೆಯ ಸೇವೆಯನ್ನು ಪಡೆಯಲು, Facebook ಮತ್ತು Instagram ಬಳಕೆದಾರರು ತಮ್ಮ ಖಾತೆಯನ್ನು ಸರ್ಕಾರಿ ID ಕಾರ್ಡ್‌ನೊಂದಿಗೆ ಪರಿಶೀಲಿಸಬೇಕಾಗುತ್ತದೆ. ಫೆಬ್ರವರಿ ತಿಂಗಳಲ್ಲಿ ಮೆಟಾ ತನ್ನ’ಮೆಟಾ ವೆರಿಫೈಡ್’ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿತ್ತು. ಆ ಸಮಯದಲ್ಲಿ ಕಂಪನಿಯು ಈ ಸೇವೆಯನ್ನು ಯುಎಸ್‌ನಲ್ಲಿ ಮಾತ್ರ ಲಭ್ಯವಾಗುವಂತೆ ಮಾಡಿತ್ತು. ಇದರ ನಂತರ ಮಾರ್ಚ್ 16 ರಂದು UK ಮತ್ತು ಮಾರ್ಚ್ 31 ರಂದು ಕೆನಡಾದಲ್ಲಿ ಲಭ್ಯವಾಯಿತು. ಸದ್ಯ ಭಾರತೀಯ ಬಳಕೆದಾರರಿಗೂ ಈ ಸೌಲಭ್ಯವನ್ನು ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ.
ಪಾವತಿಸಿದ ವೆರಿಫೈಡ್ ಅಕೌಂಡ್ಗೆ ಕಂಪನಿಯಿಂದ ಹಲವು ವಿಶೇಷ ಸೌಲಭ್ಯಗಳನ್ನು ನೀಡಲಾಗುವುದು ಎಂದು ಕಂಪನಿ ಹೇಳಿದೆ.
ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ Twitter ವೆರಿಫೈಡ್ ಖಾತೆಗಳಿಗೆ ಮಾಸಿಕ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿದೆ. ಟ್ವಿಟರ್ ವೆಬ್‌ನಲ್ಲಿ ಪರಿಶೀಲನೆಗಾಗಿ ತಿಂಗಳಿಗೆ ರೂ 650 ಶುಲ್ಕ ವಿಧಿಸುತ್ತದೆ, ಆದರೆ ಟ್ವಿಟರ್ ಬ್ಲೂಟಿಕ್ ಭಾರತದಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್ ಸಾಧನಗಳಿಗೆ ರೂ 900 ವೆಚ್ಚವಾಗುತ್ತದೆ ಎಂದು ವರದಿಯಲ್ಲಿ ತಿಳಿದುಬಂದಿದೆ.
ಕೇವಲ ಸಿನಿಮಾ ನಟರು, ರಾಜಕಾರಣಿಗಳು, ಸ್ಪೋರ್ಟ್ಸ್ನವರು ಮತ್ತು ಯಾವುದಾದರೂ ಸಾಧನೆ ಮಾಡಿದವರು ಹೊಂದಿದ್ದರು. ಆದರೆ ಇನ್ನುಮುಂದಿನ ದಿನಗಳಲ್ಲಿ ಎಂಥವರಿಗೂ ಟ್ವಿಟರ್ನಲ್ಲಿ ಚಂದಾದಾರಿಕೆ ಮೂಲಕ ಬ್ಲೂ ಟಿಕ್ ಪಡೆಯಬಹುದಾಗಿದೆ.