ಮೆಕ್ಸಿಕನ್ ವಿಮಾನ ನಿಲ್ದಾಣದಲ್ಲಿ ಮಾನವ ತಲೆಬುರುಡೆಗಳು ಪತ್ತೆ; US ಗೆ ಕೊರಿಯರ್ ಮಾಡಲಾಗುತ್ತಿತ್ತು..
ಅಮೇರಿಕಾಗೆ ಕೊರಿಯರ್ ಮೂಲಕ ಕಳುಹಿಸಬೇಕಾಗಿದ್ದ ಮೆಕ್ಸಿಕನ್ ವಿಮಾನ ನಿಲ್ದಾಣದಲ್ಲಿ ನಾಲ್ಕು ಮಾನವ ತಲೆಬುರುಡೆಗಳು ಪತ್ತೆಯಾಗಿವೆ ಎಂದು ವಿಮಾನ ನಿಲ್ದಾಣದ ಸ್ಥಳಿಯ ಅಧಿಕಾರಿಗಳು ಹೇಳಿದ್ದಾರೆ.
ಮಧ್ಯ ಮೆಕ್ಸಿಕೋದ ಕ್ವೆರೆಟಾರೊ ಇಂಟರ್ಕಾಂಟಿನೆಂಟಲ್ ಏರ್ಪೋರ್ಟ್ನಲ್ಲಿ ರಟ್ಟಿನ ಪೆಟ್ಟಿಗೆಯೊಳಗೆ ಅಲ್ಯೂಮಿನಿಯಂ ಫಾಯಿಲ್ನಲ್ಲಿ ಸುತ್ತಿದ ತಲೆಬುರುಡೆಗಳು ಪತ್ತೆಯಾಗಿವೆ ಎಂದು ನ್ಯಾಷನಲ್ ಗಾರ್ಡ್ ತನ್ನ ಹೇಳಿಕೆಯಲ್ಲಿ ದಾಖಲಿಸಿದೆ.
ದೇಶದ ಅತ್ಯಂತ ಹಿಂಸಾತ್ಮಕ ಭಾಗಗಳಲ್ಲಿ ಒಂದಾದ ಪಶ್ಚಿಮ ಕರಾವಳಿ ರಾಜ್ಯವಾದ ಮೈಕೋವಾಕನ್ನಿಂದ ಈ ಪ್ಯಾಕೇಜ್ ನ್ನ ಕಳುಹಿಸಲಾಗಿದೆ. ಇದನ್ನ ಮತ್ತು ಕೆರೊಲಿನಾದ ಮ್ಯಾನಿಂಗ್ ನಲ್ಲಿ ಬರುವ ವಿಳಾಸಕ್ಕೆ ಕಳುಹಿಸಲು ಕೊರಿಯರ್ ಮಾಡಲಾಗಿತ್ತು ಎಂದು ನಾಷನಲ್ ಗಾರ್ಡ್ ತಿಳಿಸಿದೆ. ಮಾನವ ಅವಶೇಷಗಳ ಹೆಚ್ಚಿನ ಗುರುತನ್ನ ಹೆಚ್ಚಿನ ವಿವರಗಳನ್ನ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.
ಮಾನವ ಅವಶೇಷಗಳ ವರ್ಗಾವಣೆಗೆ ಸಮರ್ಥ ಆರೋಗ್ಯ ಪ್ರಾಧಿಕಾರದಿಂದ ವಿಶೇಷ ಅನುಮತಿಯನ್ನ ಪಡೆಯಬೇಕು ಆದರೆ ಪಡೆಯಲಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
Mexican authorities uncover human skulls in package headed for US