IPL 2022  – ಮುಂಬೈಗೆ ಸವಾಲು ಎಸೆಯಲು ರಾಜಸ್ಥಾನ್ ರೆಡಿ…

1 min read

IPL 2022  – ಮುಂಬೈಗೆ ಸವಾಲು ಎಸೆಯಲು ರಾಜಸ್ಥಾನ್ ರೆಡಿ…

ಐಪಿಎಲ್ ಅಭಿಮಾನಿಗಳಿಗೆ ಇಂದು ಡಬಲ್  ಧಮಾಕ, ಶನಿವಾರ ನಡೆಯುತ್ತಿರುವ ಡಬಲ್ ಹೆಡರ್‌  ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ನಡೆಯಲಿದೆ. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಲಿದೆ. ಮುಂಬೈ ಟೀಮ್ ಕುರಿಯು ಮಾತನಾಡುವುದಾದರೆ ಮೊದಲ ಪಂದ್ಯವನ್ನ  ಸೋಲುವ ತನ್ನ ಸಂಪ್ರದಾಯವನ್ನ  ಈ ಭಾರಿಯೂ ಮುಂದುವರೆಸಿದೆ. ಮೊದಲ ಪಂದ್ಯದಲ್ಲಿ  ದೆಲ್ಲಿ ಕ್ಯಾಪಿಟಲ್ಸ್ ಕೈಯಲ್ಲಿ 4 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಮತ್ತೊಂದೆಡೆ, ರಾಜಸ್ಥಾನ ಮೊದಲ ಪಂದ್ಯದಲ್ಲಿ SRH ನ್ನ 61 ರನ್‌ಗಳಿಂದ ಮಣಿಸಿ ಮುಂಬೈಯನ್ನು ಎದುರಿಸಲು ಸಜ್ಜಾಗಿದೆ.

ಐಪಿಎಲ್‌ನಲ್ಲಿ ಉಭಯ ತಂಡಗಳ ನಡುವೆ ಒಟ್ಟು 25 ಪಂದ್ಯಗಳು ನಡೆದಿವೆ.  13 ಪಂದ್ಯಗಳಲ್ಲಿ RR 11 ಪಂದ್ಯಗಲ್ಲಿ MI ಗೆದ್ದಿದೆ. 1 ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. 2010 ರಲ್ಲಿ ರಾಜಸ್ಥಾನ ವಿರುದ್ಧ 212 ರನ್ ಗಳಿಸಿರುವುದು ಇನ್ನಿಂಗ್ಸ್ ಒಂದರಲ್ಲಿ  ಮುಂಬೈನ ಗರಿಷ್ಠ ಸ್ಕೋರ್.  92  ಅತಿ ಕಡಿಮೆ ಸ್ಕೋರ್.  ಮುಂಬೈ ವಿರುದ್ಧ 208 ರನ್ ಗಳಿಸಿರುವುದು ರಾಜಸ್ಥಾನದ ಇನ್ನಿಂಗ್ಸ್ ಒಂದರ ಗರಿಷ್ಠ ಮೊತ್ತ. 90 ಅತಿ ಕಡಿಮೆ ರನ್.  ಎರಡು ತಂಡಗಳ ಹಣಾಹಣಿಯಲ್ಲಿ ಸಂಜು ಸ್ಯಾಮ್ಸನ್ ಗರಿಷ್ಠ 416 ರನ್ ಗಳಿಸಿದ್ದಾರೆ. ಎರಡೆನೇ ಸ್ಥಾನ 316 ರನ್ ಗಳಿಸಿದ ರೋಹಿತ್ ಶರ್ಮಾ ಹೆಸರಲ್ಲಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd