ಇಂದಿನಿಂದ ಅಮುಲ್ ಮತ್ತು ಮದರ್ ಡೈರಿ ಹಾಲಿನ ಬೆಲೆ ಹೆಚ್ಚಳ
ಗುಜರಾತ್ ಕೋ-ಆಪರೇಟಿವ್ ಹಾಲು ಮಾರಾಟ ಒಕ್ಕೂಟ ಅಮುಲ್ ಬ್ರಾಂಡಿನ ಹಾಲಿನ ಬೆಲೆಯನ್ನು ಲೀಟರ್ಗೆ 2 ರುಪಾಯಿ ಹೆಚ್ಚಿಸಿದೆ. ಇದರ ಜೊತೆಗೆ ಮದರ್ ಡೈರಿ ಕೂಡ ಹಾಲಿನ ದರವನ್ನ ಹೆಚ್ಚಿಸಿದೆ. ಹೊಸ ದರಗಳು ಇಂದಿನಿಂದ (ಆಗಸ್ಟ್ 17, 2022) ಜಾರಿಗೆ ಬರಲಿವೆ.
ಅಮುಲ್ ಹಾಲಿನ ಬೆಲೆ ಹೆಚ್ಚಳ ದೆಹಲಿ ಮತ್ತು ಎನ್ಸಿಆರ್, ಪಶ್ಚಿಮ ಬಂಗಾಳ, ಮುಂಬೈ ಮತ್ತು ಗುಜರಾತ್ನ ಅಹಮದಾಬಾದ್ ಮತ್ತು ಸೌರಾಷ್ಟ್ರ ಸೇರಿ ಅಮುಲ್ ಉತ್ಪನ್ನಗಳನ್ನು ಮಾರಾಟ ಮಾಡುವ ಇತರ ಎಲ್ಲ ಸ್ಥಳಗಳಲ್ಲಿ ಅನ್ವಯವಾಗಲಿದೆ.
ಅಮುಲ್ ಹಾಲಿನ ದರ ಏರಿಕೆ ಘೋಷಣೆಯಾದ ಬೆನ್ನಲ್ಲೇ ಮದರ್ ಡೇರಿ ಕೂಡ ಪ್ರತಿ ಲೀಟರ್ ಹಾಲಿನ ದರದಲ್ಲಿ ಎರಡು ರುಪಾಯಿ ಏರಿಕೆ ಮಾಡುವುದಾಗಿ ಘೋಷಿಸಿದೆ. ಮದರ್ ಡೈರಿಯ ನೂತನ ದರಗಳು ಸಹ ಇಂದಿನಿಂದ ಆಗಸ್ಟ್ 17 ರಿಂದ ಜಾರಿಗೆ ಬರಲಿವೆ.
ಹಾಲಿನ ಉತ್ಪಾದನೆ ಮತ್ತು ನಿರ್ವಹಣೆ ಶುಲ್ಕ ಹೆಚ್ಚಳವಾಗಿರುವ ಕಾರಣ ಹಾಲಿನ ದರವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಸಿಎಂಎಂಎಫ್ ಹೇಳಿದೆ. ಪ್ರತಿ ಲೀಟರ್ ಹಾಲಿನ ದರದಲ್ಲಿ 2 ರೂ.ಗಳಷ್ಟು ಏರಿಕೆಯಾಗಿದ್ದು, MRP ಯಲ್ಲಿ ಶೇಕಡಾ 4 ರಷ್ಟು ಹೆಚ್ಚಳವಾಗಿದೆ ಎಂದು GCMMF ತಿಳಿಸಿದೆ.