ನಿರಂತರ ಅತ್ಯಾಚಾರ – ಅಪ್ರಾಪ್ತ ಮಗಳನ್ನ ಗರ್ಭಿಣಿಯಾಗಿಸಿದ್ದ ಪಾಪಿ ತಂದೆ ಅರೆಸ್ಟ್..!
ಬೆಂಗಳೂರು: 15 ವರ್ಷದ ಅಪ್ರಾಪ್ತೆ ಮೇಲೆ ಮಲತಂದೆಯೋರ್ವ ನಿರಂತರ ಅತ್ಯಾಚಾರವೆಸಗಿದ್ದು, ಸಂತ್ರಸ್ತೆಯು ಗರ್ಭಿಣಿಯಾಗಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿತ್ತು. ಇದೀಗ ಪ್ರಕರಣ ಸಂಬಂಧ ಆರೋಪಿಯಾಗಿರುವ ಆಟೋಚಾಲಕ ಶಬೀರ್ ನನ್ನ ಪೊಲೀಸರು ಬಂಧಿಸಿದ್ದಾರೆ. ಶಬ್ಬೀರ್ ಎಂಬಾತ ಸಂತ್ರಸ್ತೆಯ ತಾಯಿಯ ಜೊತೆಗೆ 2ನೇ ಮದುವೆಯಾಗಿದ್ದ. ಸಂತ್ರಸ್ತೆ ತಾಯಿಗೇ ಈ ಮೊದಲೆ ಮದುವೆಯಾಗಿ ಡೈವೋರ್ಸ್ ಆಗಿತ್ತು. ಶಬೀರ್ ಗೂ ಕೂಡ ಇದು 2 ನೇ ಮದುವೆಯಾಗಿದೆ.
ಇನ್ನೂ ಸಂತ್ರಸ್ತೆಯ ತಾಯಿ 3ನೇ ಮಗುವಿನ ಹೆರಿಗೆಗಾಗಿ ತವರಿಗೆ ಹೋಗಿದ್ದ ವೇಳೆ ಆಕೆಯ ಮೊದಲ ಪತಿಯ ಮಗಳ (15) ಮೇಲೆ ಈ ಕಾಮುಕ ರಾಕ್ಷಸನಂತೆ ಎರಗಿದ್ದು, ನಿರಂತರ ಅತ್ಯಾಚಾರವೆಸಗಿದ್ದಾನೆ. ಇದರಿಂದ ಬಾಲಕಿಯು ಗರ್ಭಿಣಿಯಾಗಿದ್ದಾಳೆ.
ಮಲತಂದೆಯ ಲೈಂಗಿಕ ದೌರ್ಜನ್ಯದ ಬಗ್ಗೆ ಬಾಲಕಿಯು ತನ್ನ ಸ್ವಂತ ತಂದೆಯ ಬಳಿ ಕರೆ ಮಾಡಿ ಬಹೇಳಿಕೊಂಡಿದ್ದಾಳೆ. ಬಳಿಕ ಸ್ಥಳಕ್ಕೆ ಬಂದ ಸಂತ್ರಸ್ತೆಯ ತಂದೆ ಸ್ಥಳೀಯರ ಜೊತೆಗೂಡಿ ಆರೋಪಿಯನ್ನ ಥಳಿಸಿ ಜೈಲಿಗಟ್ಟಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಚಿಕ್ಕಪ್ಪನ ಮಗನನ್ನೇ ಮದುವೆಯಾದ ಮಗಳ ಫೋಟೋದ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ..!
ಸಿಡಿ ಪ್ರಕರಣ | ಬೌರಿಂಗ್ ಆಸ್ಪತ್ರೆಯಲ್ಲಿ ಯುವತಿ ವೈದ್ಯಕೀಯ ಪರೀಕ್ಷೆ
ವೆಡ್ಡಿಂಗ್ ಫೋಟೋ ಶೂಟ್ ಕರ್ಮಕಾಂಡ..! ಕೈಯಲ್ಲಿ ಬಾಟ್ಲಿ ಸಿಗರೇಟ್ ಹಿಡಿದ ವಧು ವಿರುದ್ಧ ಆಕ್ರೋಶ..!