ಬೆಂಗಳೂರು: ಇಲ್ಲಿಯ ಕಾಫಿ ಶಾಪ್ ವೊಂದರ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾ ಆನ್ ಮಾಡಿ ಇಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶಿವಮೊಗ್ಗ ಮೂಲದ ಮನೋಜ್ (23) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಕೂಡ ಅದೇ ಕಾಫಿ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ. ಈತ ಕಾಫಿ ಶಾಪ್ ನಲ್ಲಿ ಕಾಫಿ ಮೇಕರ್ ಆಗಿದ್ದ. ಪ್ರಕರಣ ಸಂಬಂಧ ಕ್ಷಮೆ ಕೇಳಿಸಿ ಆತನನ್ನು ವಜಾ ಮಾಡಲಾಗಿತ್ತು.
ಬಿಇಎಲ್ ರಸ್ತೆಯಲ್ಲಿರೋ ಥರ್ಡ್ ವೇವ್ ಕೆಫೆಯ ವಾಶ್ ರೂಮ್‍ನ ಕಸದ ಡಬ್ಬದಲ್ಲಿ ಸಣ್ಣನ ರಂಧ್ರ ಮಾಡಿ ಮೊಬೈಲ್ ನ್ನು ಫ್ಲೈಟ್ ಮೋಡ್ ಗೆ ಹಾಕಿ ಮೊಬೈಲ್ ಕ್ಯಾಮೆರಾ ಆನ್ ಮಾಡಿ ಇಟ್ಟಿದ್ದ. ಮಹಿಳೆಯೊಬ್ಬರು ವಾಶ್ ರೂಮ್ ಗೆ ಹೋದಾಗ ಮೊಬೈಲ್ ಇಟ್ಟಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆನಂತರ ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ, ಕಾಫಿ ಶಾಪ್ ನವರು ಈ ಪ್ರಮಾಣದಕ್ಕೆ ಕ್ಷಮೆ ಯಾಚಿಸಿದ್ದಾರೆ. ಅಲ್ಲದೇ, ಗ್ರಾಹಕರ ಸುರಕ್ಷತೆ ನಮಗೆ ಮುಖ್ಯ. ಆತನನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಹೇಳಿದ್ದಾರೆ.