ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿ ಅವರಿಗೆ 7 ಕೋಟಿ ಫಾಲೋವರ್ಸ್ – ನಂಬರ್ 1 ಸ್ಥಾನದಲ್ಲಿ ನಮೋ..!
ವಿಶ್ವದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟ್ಟರ್ ಖಾತೆಗೆಯಲ್ಲಿ 7 ಕೋಟಿಗೂ ಹೆಚ್ಚು ಫಾಲೋವರ್ ಗಳಾಗಿದ್ದಾರೆ. ಈ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ ವಿಶ್ವದ ಸಕ್ರಿಯ ರಾಜಕಾರಣಿ ವಿಶ್ವನಾಯಕ ಎನಿಸಿಕೊಂಡಿದ್ದಾರೆ ನಮೋ.
ಇನ್ನೂ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಅವರನ್ನು 12.98 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ. ಮೋದಿ ಅವರು 2009ರಲ್ಲಿ ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ ಟ್ವಿಟರ್ ಪ್ರವೇಶಿಸಿದ್ದರು. ಒಂದು ವರ್ಷದಲ್ಲಿ ಅವರು ಒಂದು ಲಕ್ಷ ಫಾಲೋವರ್ ಗಳನ್ನು ಗಳಿಸಿದರು. ಜುಲೈ 2020ರ ಹೊತ್ತಿಗೆ ಪ್ರಧಾನಿ ಮೋದಿ ಅವರ ಟ್ವಿಟರ್ ಖಾತೆಯನ್ನು 6 ಕೋಟಿ ಮಂದಿ ಫಾಲೋ ಮಾಡಿದ್ದರು. 2020ರ ಜುಲೈನಿಂದ 2021ರ ಜುಲೈ ನಡುವಿನ ಈ ಒಂದು ವರ್ಷದ ಅವಧಿಯಲ್ಲಿ ಅವರು ಒಂದು ಕೋಟಿ ಫಾಲೋವರ್ ಗಳನ್ನು ಪಡೆದುಕೊಂಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಟ್ವಿಟರ್ನಲ್ಲಿ 8.3 ಕೋಟಿ ಹಿಂಬಾಲಕರಿದ್ದರು. ಆದರೆ, ಅವರ ಖಾತೆಯನ್ನ ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲಾದ ನಂತರ ಮೋದಿ ಅವರು ನಂಬರ್ 1 ಸ್ಥಾನದಲ್ಲಿದ್ದಾರೆ. ಮೋದಿ ಅವರು ತಮ್ಮ ಖಾತೆಯಿಂದ 2,350 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ. ಈ ವರೆಗೆ 30 ಸಾವಿರಕ್ಕೂ ಮಿಗಿಲಾದ ಪೋಸ್ಟ್ಗಳನ್ನು ಪ್ರಕಟಿಸಿದ್ದಾರೆ.
ವರನಿಗೆ ಪೆಟ್ರೋಲ್ ಗಿಫ್ಟ್ ಕೊಟ್ಟು ಬಿಜೆಪಿಯನ್ನು ಉರಿಸಿದ ಕಾಂಗ್ರೆಸ್ ನಾಯಕ..!
ಟೋಕಿಯೊ ಒಲಿಂಪಿಕ್ಸ್ 2021 – ಮೂವರು ಅಥ್ಲೀಟ್ ಸೇರಿದಂತೆ 24 ಮಂದಿಗೆ ಕೊರೊನಾ ಪಾಸಿಟಿವ್..!
ವಾಯುವಿಹಾರಕ್ಕೆ ಹೊರಟಿದ್ದಾಗ ಆಟೋ ಗುದ್ದಿ ನ್ಯಾಯಾಧೀಶರ ಸಾವು – ಕೊಲೆ ಅನುಮಾನ ಮೂಡಿಸಿದ VIDEO