ಬೆಂಗಳೂರು ಐತಿಹಾಸಿಕ ಹಿನ್ನೆಲೆ ಅಧ್ಯಯನ ಮಾಡುವುದರ ಜೊತೆಗೆ ಅದನ್ನು ಇತರರಿಗೂ ಪರಿಚಯಿಸಲು ಶ್ರಮಿಸುತ್ತಿರುವ ಬೆಂಗಳೂರಿನ ಶಿಲಾಶಾಸನಗಳ ಪರಿಣತ ಧನಪಾಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮನ ಪೂರ್ವಕವಾಗಿ ಹೊಗಳಿದ್ದಾರೆ.
ನಾವು ಈಗ ವಿದೇಶಗಳಿಗೂ ಪ್ರಯಾಣ ಕೈಗೊಳ್ಳುತ್ತಿದ್ದೇವೆ. ನಮ್ಮ ನೆಲದ ಕುರಿತು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಪರಂಪರೆಯನ್ನು ಮರುಶೋಧಿಸುವಲ್ಲಿ ಉತ್ಸಾಹ ಹೊಂದಿರುವ ಧನಪಾಲ್ ಅವರ ಕುರಿತು ಹೆಮ್ಮೆ ಎನಿಸುತ್ತದೆ ಎಂದು ಹೇಳಿದ್ದಾರೆ.
ಶಿಲಾಶಾಸನಗಳ ಅಧ್ಯಯನದಲ್ಲಿ ಡಿಪ್ಲೊಮಾ ಪಡೆದುಕೊಂಡರು. ಇಲ್ಲಿಯವರೆಗೆ ಅವರು ಕೈಗೊಂಡಿರುವ ಕಾರ್ಯದ ಬಗ್ಗೆ ಹೆಮ್ಮೆ ಎನಿಸುತ್ತದೆ. ಅವರಿಂದ ಸ್ಫೂರ್ತಿ ಪಡೆದು ಬೇರೆಯವರು ಸಹ ಅವರ ನಗರ ಮತ್ತು ಪಟ್ಟಣಗಳಲ್ಲಿ ಇದೇ ರೀತಿ ಮಾಡುವಂತೆ ನಾನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.