ನವದೆಹಲಿ: ಭಾರತ-ಚೀನಾ ಘರ್ಷಣೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ತಮಾಷೆಯ ಹೇಳಿಕೆಯನ್ನು ತಿರುಚಲಾಗುತ್ತಿದೆ. ಚೀನಿಯರು ನಮ್ಮ ಗಡಿ ಪ್ರದೇಶಕ್ಕೆ ಪ್ರವೇಶ ಮಾಡಿದ್ದರು ಎಂದು ಮೋದಿ ಹೇಳಿಲ್ಲ ಎಂದು ಪ್ರಧಾನಿ ಕಚೇರಿ ಮೂಲಗಳು ಸ್ಪಷ್ಟನೆ ನೀಡಿವೆ.
ಪ್ರಧಾನಿ ಹೇಳಿದ್ದು ನಮ್ಮ ಸೇನಾಪಡೆಯ ಸಾಹಸದ ಕುರಿತು ಅಷ್ಟೇ. ಆದರೆ, ಈ ಹೇಳಿಕೆಯನ್ನ ಕೆಲವರು ತಿರುಚುತ್ತಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.
ಶುಕ್ರವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ, ಗಾಲ್ವನ್ ಕಣಿವೆಯಲ್ಲಿ ಭಾರತೀಯ ಪ್ರದೇಶಕ್ಕೆ ಯಾರೂ ಒಳನುಸುಳಿಲ್ಲ, ಯಾವುದೇ ಮಿಲಿಟರಿ ಪೋಸ್ಟನ್ನು ವಶಪಡಿಸಿಕೊಂಡಿಲ್ಲ ಎಂದು ಹೇಳಿದ್ದರು. ಮೋದಿ ಅವರ ಈ ಹೇಳಿಕೆ ಪ್ರತಿಪಕ್ಷಗಳ ನಾಯಕರ ಟೀಕೆಗೆ ಗುರಿಯಾಗಿತ್ತು.
ಸೇನಾ ಕ್ವಾರ್ಟರ್ಸ್ಗಳನ್ನ ನಿರ್ಮಿಸಲು ಚೀನೀಯರು ಮಾಡುತ್ತಿದ್ದ ಪ್ರಯತ್ನ ಹಾಗೂ ಆ ದಿನ ಎಲ್‌ಎಸಿಯೊಳಗೆ ಚೀನೀಯರು ಅತಿಕ್ರಮಣಕ್ಕೆ ಮಾಡಿದ ಪ್ರಯತ್ನವನ್ನ 16ನೇ ಬಿಹಾರ್ ರೆಜಿಮೆಂಟ್ ತುಕಡಿಗಳ ಸೈನಿಕರು ವಿಫಲಗೊಳಿಸಿದರು ಎಂದು ಪಿಎಂಒ ಹೇಳಿದೆ.