ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹಿಂದುಳಿದ ವರ್ಗದ (OBC) ಕುಟುಂಬದಲ್ಲಿ ಹುಟ್ಟಿಲ್ಲ. ಹೀಗಾಗಿಯೇ ಅವರು ಬಡವರ ಕೈ ಕುಲುಕುವುದಿಲ್ಲ. ಶ್ರೀಮಂತರನ್ನು ಮಾತ್ರ ತಬ್ಬಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದಾರೆ.
ಒಡಿಶಾದ (Odisha) ಜಾರಸುಗುಡದಲ್ಲಿ ಭಾರತ್ ನ್ಯಾಯ ಯಾತ್ರೆ (Bharat Nyay Yatra) ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹಿಂದುಳಿದ ವರ್ಗದಲ್ಲಿ ಹುಟ್ಟಿರುವುದಾಗಿ ಸುಳ್ಳು ಹೇಳುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ಅವರು ತೇಲಿ (Teli) ಜಾತಿಯಲ್ಲಿ ಹುಟ್ಟಿದವರು. ಗುಜರಾತ್ ನಲ್ಲಿನ ಬಿಜೆಪಿ ಸರ್ಕಾರ 2000ರಲ್ಲಿ ಆ ಜಾತಿಯನ್ನು ಒಬಿಸಿ ಪಟ್ಟಿಗೆ ಸೇರಿಸಿತ್ತು. ಆದರೆ, ಪ್ರಧಾನಿ ಹುಟ್ಟಿನಿಂದಲೂ ಒಬಿಸಿಯಲ್ಲ. ಹೀಗಾಗಿಯೇ ಅವರಿಗೆ ಶ್ರೀಮಂತರೆಂದರೆ ಇಷ್ಟ. ಅವರು ಸಾಮಾನ್ಯ ಜಾತಿಗೆ ಸೇರಿದವರು. ಒಬಿಸಿಯಲ್ಲಿ ಜನಿಸದ ಕಾರಣ ಮೋದಿ ತಮ್ಮ ಇಡೀ ಜೀವನದಲ್ಲಿ ಜಾತಿ ಗಣತಿ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.