ಲಂಡನ್: ಬ್ರಿಟನ್ ನ ( Great Britain) ರಾಜ 3ನೇ ಚಾರ್ಲ್ಸ್ ಅವರು ಗುಣಮುಖರಾಗಲೆಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ.
3ನೇ ಚಾರ್ಲ್ಸ್ ಅವರು ಕ್ಯಾನ್ಸರ್ ನಿಂದ (Cancer) ಬಳಲುತ್ತಿದ್ದಾರೆಂದು ಬಕಿಂಗ್ಹ್ಯಾಮ್ ಅರಮನೆ (Buckingham Palace) ಸ್ಪಷ್ಟಪಡಿಸಿದೆ. ಕ್ಯಾನ್ಸರ್ ಇರುವುದರಿಂದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ಪ್ರಧಾನಿ ಮೋದಿ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. “3 ಚಾರ್ಲ್ಸ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಅವರಿಗೆ ಒಳ್ಳೆ ಆರೋಗ್ಯ ಸಿಗಲಿ. ಅದಕ್ಕೆ ನಾನು ಭಾರತದ ಜನರೊಂದಿಗೆ ಸೇರಿ ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak) ಅವರು ಸಹ ಚಾರ್ಲ್ಸ್ ಅವರಿಗೆ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.