ತಂದೆಯನ್ನ ನೆನೆದು ಶಮಿ ಭಾವುಕ
ನಾನು ಒಂದು ಹಳ್ಳಿಯಿಂದ ಬಂದೆ. ಅಲ್ಲಿ ಈಗಲೂ ಮೂಲಭೂತ ಸೌಲಭ್ಯಗಳಲಿಲ್ಲ. ಇಂತಹ ಸ್ಥಳದಿಂದ ಇಲ್ಲಿಗೆ ಬಂದ ಕೀರ್ತಿ ನಮ್ಮ ತಂದೆಯವರಿಗೆ ಸಲ್ಲುತ್ತದೆ.
ಕ್ರಿಕೆಟ್ ಪ್ರಾಕ್ಟೀಸ್ ಗಾಗಿ ನಮ್ಮ ಊರಿನಿಂದ ಸುಮಾರು 30 ಕಿಲೋ ಮೀಟರ್ ಪ್ರಯಾಣ ಮಾಡಬೇಕಿತ್ತು.
ಹೀಗಾಗಿ ನನ್ನ ತಂದೆ ನನ್ನ ಜೊತೆಯಲ್ಲಿಯೇ ಬರುತ್ತಿದ್ದರು. ನನ್ನ ಸಹೋದರ ನನ್ನ ಬೆಂಬಲಕ್ಕೆ ನಿಂತಿದ್ದ.
ಎಷ್ಟೆಷ್ಟೋ ಕಷ್ಟಗಳು, ಹೋರಾಟಗಳ ನಂತರ ನಾನು ಈಗಿರುವ ಸ್ಥಿತಿಗೆ ಬಂದಿದ್ದೇನೆ. ನನಗೆ ದೊರೆಯುತ್ತಿರುವ ಪ್ರಶಂಸೆಗಳನ್ನ ಸ್ವೀಕರಿಸಲು ನನ್ನ ತಂದೆ ಅರ್ಹರು.
ನಾನು ಈ ದಿನ ಇಲ್ಲಿರಲು ನನ್ನ ತಂದೆ, ಸೋದರನ ಪ್ರೋತ್ಸಾಹವೇ ಕಾರಣ. ನನ್ನ ಸಾಧನೆಯ ಘನತೆ ಅವರಿಗೆ ಸಲ್ಲಬೇಕು ಎಂದು ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಭಾವುಕರಾಗಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶಮಿ ಉತ್ತಮವಾದ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ.
ಮೂರನೇ ದಿನದಾಟದ ಭಾಗವಾಗಿ 16 ಓವರ್ ಗಳನ್ನು ಎಸೆದ ಶಮಿ 44 ರನ್ ಗಳನ್ನು ನೀಡಿ ಐದು ವಿಕೆಟ್ ಕಬಳಿಸಿದ್ದಾರೆ.
ಇದರೊಂದಿಗೆ ತಮ್ಮ ಟೆಸ್ಟ್ ಕ್ರಿಕೆಟ್ ಕೆರಿಯರ್ ನಲ್ಲಿ ಆರನೇ ಬಾರಿಗೆ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ, ಅಲ್ಲದೇ ಆಫ್ರಿಕಾ 197 ರನ್ ಗಳಿಗೆ ಆಲೌಟ್ ಆಗಿ ಭಾರತಕ್ಕೆ ಮುನ್ನಡೆ ಬರುವಲ್ಲಿ ಶಮಿ ಪ್ರಮುಖ ಪಾತ್ರವಹಿಸಿದ್ದಾರೆ.
ಇದಲ್ಲದೆ ಶಮಿ ಟೆಸ್ಟ್ ಕ್ರಿಕೆಟ್ ನಲ್ಲಿ 200 ವಿಕೆಟ್ ಪಡೆದ 11ನೇ ಬೌಲರ್ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ. ಹೀಗಾಗಿ ಶಮಿ ಮೇಲೆ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ.
ಇದರ ಭಾಗವಾಗಿಯೇ ಶಮಿ ಸ್ಪೆಷನ್ ಸಂದರ್ಶನ ಕೊಟ್ಟಿದ್ದು, ಇದರಲ್ಲಿ ತಮ್ಮ ಕ್ರಿಕೆಟ್ ಬದುಕಿನ ಆರಂಭದ ದಿನಗಳನ್ನು ನೆನೆದಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ ನಲ್ಲಿ 197 ರನ್ ಗಳಿಗೆ ಆಲೌಟ್ ಆಗಿದ್ದು, ಭಾರತಕ್ಕೆ 130 ರನ್ ಗಳ ಮುನ್ನಡೆ ದೊರಕಿದೆ.
ಈ ಲೀಡ್ ನೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ 16 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡಿದೆ. 5 ರನ್ ಗಳಿಸಿ ರಾಹುಲ್, 4 ರನ್ ಗಳಿಸಿ ಶರ್ದೂಲ್ ಕ್ರೀಸ್ ನಲ್ಲಿದ್ದಾರೆ.









