ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಮಹದೇವ’ ಖ್ಯಾತಿಯ ನಟ  ಮೋಹಿತ್ ರೈನಾ..!

1 min read

ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಮಹದೇವ’ ಖ್ಯಾತಿಯ ನಟ  ಮೋಹಿತ್ ರೈನಾ..!

ಹಿಂದಿಯಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದ ‘ದೇವೋಂಕೆ ದೇವ್ ಮಹದೇವ್’ ಧಾರಾವಹಿಯಿಂದ ನಟ ಮೋಹಿತ್ ರೈನಾ ಅವರು ಅಪಾರ ಪ್ರಮಾಣದ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.. ಜನರು ಅವರನ್ನ ಮೋಹಿತ್ ಅನ್ನುವುದಕ್ಕಿಂತ ಮಹದೇವ ಅಂತಲೇ ಗುರುತಿಸುತ್ತಾರೆ.. ಅಷ್ಟರ ಮಟ್ಟಿಗೆ ಮಹದೇವನಾಗಿ ಮೋಹಿತ್ ಆ ಪಾತ್ರಕ್ಕೆ ಜೀವ ತುಂಬಿದ್ದರು..

ಇದೀಗ ನಟ ಮೋಹಿತ್ ರೈನಾ ಅವರು ತಮ್ಮ ಬಹುಕಾಲದ ಗೆಳತಿ ಅದಿತಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..  2022ರ ಜನವರಿ 1ರಂದು ಹೊಸ ವರ್ಷದ ದಿನದಂದೇ ತಮ್ಮ ಗೆಳತಿ ಜೊತೆಗೆ ಮದುವೆಯಾಗಿದ್ದಾರೆ.. ತಮ್ಮ ಅದ್ಧೂರಿ ಮದುವೆಯ ಫೋಟೋಗಳನ್ನ ಮೋಹಿತ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..

 

ಫೋಟೋ ಜೊತೆಗೆ, ಪ್ರೀತಿ ಇರುವಲ್ಲಿ ಅಡೆತಡೆಗಳಿರುವುದಿಲ್ಲ. ಅಡೆತಡೆಗಳಿದ್ದರೂ ಬೇಲಿಯನ್ನು ದಾಟುತ್ತೇವೆ. ಗುರಿಯನ್ನು ತಲುಪಲು ತಡೆಗೋಡೆಗಳನ್ನು ಭೇದಿಸುವ ಭರವಸೆಯಿಂದ ಮುನ್ನುಗ್ಗುತ್ತೇವೆ. ಈ ಭರವಸೆಯಿಂದ ನಾವಿಂದು ನಮ್ಮ ತಂದೆ, ತಾಯಿ ಆಶೀರ್ವಾದದಿಂದ ಒಂದಾಗಿದ್ದೇವೆ. ನಮ್ಮಿಬ್ಬರ ಈ ಹೊಸ ಪ್ರಯಾಣಕ್ಕೆ ನಿಮ್ಮೆಲ್ಲರ ಪ್ರೀತಿ ಹಾಗೂ ಆರ್ಶೀವಾದ ಬೇಕು ಎಂದು  ಬರೆದುಕೊಂಡಿದ್ದಾರೆ. ಇನ್ನೂ ಮೋಹಿತ್ ಹಾಗೂ ಅದಿತಿಗೆ ಕತ್ರಿಕಾ ಸೆಂಗಾರ್, ಕರಣ್ ಜೋಹಾರ್, ಸಚಿನ್ ಶ್ರಾಫ್, ಕರಿಷ್ಮಾ ಕೋಟಕ್ , ಸೋಮ್ಯಾ ಸೇಠ್ ಸೇರಿದಂತೆ ಚಿತ್ರರಂಗದ ಅನೇಕರು ಕಮೆಂಟ್ ಮಾಡಿ ವಿಶ್ ಮಾಡಿದ್ದಾರೆ..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd