Monkeypox in Delhi – ದೆಹಲಿಯಲ್ಲಿ ಮಂಕಿಪಾಕ್ಸ್ ಐದನೇ ಪ್ರಕರಣ ಪತ್ತೆ..
ದೆಹಲಿಯಲ್ಲಿ ಮಂಕಿಪಾಕ್ಸ್ ಐದನೇ ಪ್ರಕರಣ ಪತ್ತೆಯಾಗಿದೆ. ಲೋಕನಾಯಕ್ ಆಸ್ಪತ್ರೆಗೆ ದಾಖಲಾಗಿರುವ ಆಫ್ರಿಕನ್ ಮೂಲದ ಮಹಿಳೆಯ ಮಂಕಿಪಾಕ್ಸ್ ವರದಿ ಧನಾತ್ಮಕವಾಗಿದೆ. ಮಹಿಳೆ ದಕ್ಷಿಣ ದೆಹಲಿಯಲ್ಲಿ ವಾಸಿಸುತ್ತಿದ್ದರು. ಮಂಗನ ಕಾಯಿಲೆಯ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಲೋಕನಾಯಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಲೋಕನಾಯಕ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸುರೇಶ್ ಕುಮಾರ್ ಪ್ರಕಾರ, ಮಂಕಿಪಾಕ್ಸ್ ಗೆ ತುತ್ತಾದ ಮಹಿಳೆ ಮೂಲತಃ ಆಫ್ರಿಕಾದವಳು. ರೋಗಲಕ್ಷಣ ಕಂಡು ಬಂದ ನಂತರ ಮಹಿಳೆಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿದೆ. ಮಹಿಳೆಯ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಲೋಕನಾಯಕ ಆಸ್ಪತ್ರೆಯಲ್ಲಿ ಒಟ್ಟು ಐದು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ ಎಂದು ಡಾ.ಸುರೇಶ್ ತಿಳಿಸಿದರು. ಈ ಪೈಕಿ ಒಬ್ಬ ರೋಗಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷ ರೋಗಿಗಳು ಸೇರಿದಂತೆ ನಾಲ್ವರು ಮಂಕಿಪಾಕ್ಸ್ ಕಾಯಿಲೆಯಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಾಲ್ವರು ರೋಗಿಗಳ ಸ್ಥಿತಿ ಉತ್ತಮವಾಗಿದೆ.