ಮಂಗಗಳ ಗುಂಪು ಬಾಲಕನ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಗುಜರಾತ್ ನ ಗಾಂಧಿನಗರದ ಸಾಲ್ಕಿ ಎಂಬ ಗ್ರಾಮದಲ್ಲಿ ನಡೆದಿದೆ. ದೆಹಗಾಂ ತಾಲೂಕಿನ ದೇವಸ್ಥಾನದ ಹತ್ತಿರ ಈ ಕೋತಿಗಳು ದಾಳಿ ನಡೆಸಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ದೀಪಕ್ ಠಾಕೂರ್ ಮಂಗಗಳ ದಾಳಿಯಲ್ಲಿ ಸಾವನ್ನಪ್ಪಿದ ದುರ್ದೈವ ಬಾಲಕ ಎನ್ನಲಾಗಿದೆ.
ದೀಪಕ್ ಹಳ್ಳಿಯಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಕೋತಿಗಳ ಗುಂಪು ದಾಳಿ ನಡೆಸಿದೆ. ಮಂಗಗಳು ಬಾಲಕನ ಮೇಲೆ ಹಾರಿದ್ದವು, ಆಗ ಉಗುರಿನಿಂದ ಪರಚಿವೆ, ನಂತರ ಹೊಟ್ಟೆಯನ್ನು ಬಗೆದು ಕರುಳನ್ನು ಹೊರತೆಗೆದಿವೆ. ನಾವು ಕಳೆದ ಒಂದು ವಾರದಲ್ಲಿ ಎರಡು ಲಾಂಗುರ್‌ಗಳನ್ನು ರಕ್ಷಿಸಿದ್ದೇವೆ ಮತ್ತು ಇನ್ನೊಂದು ಲಾಂಗುರ್ ಅನ್ನು ಬಲೆಗೆ ಬೀಳಿಸಲು ಪಂಜರ ಸ್ಥಾಪಿಸಿದ್ದೇವೆ. ಗ್ರಾಮದಲ್ಲಿ ಕಳೆದ ಒಂದು ವಾರದಲ್ಲಿ ದಾಳಿಯಲ್ಲಿ ತೊಡಗಿರುವ ಕೋತಿಗಳ ದಂಡೇ ಇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.