Shivamogga: ಶಿವಮೊಗ್ಗ-ತಿರುಪತಿ-ಚೆನ್ನೈ ಸಂಪರ್ಕಿಸುವ ಹೊಸ ರೈಲು ಪ್ರಾರಂಭ

1 min read
Shivamogga Tirupati Chanai Train Saaksha Tv

ಶಿವಮೊಗ್ಗ-ತಿರುಪತಿ-ಚೆನ್ನೈ ಸಂಪರ್ಕಿಸುವ ಹೊಸ ರೈಲು ಪ್ರಾರಂಭ

ಶಿವಮೊಗ್ಗ: ಶಿವಮೊಗ್ಗದಿಂದ ತಿರುಪತಿ ಮತ್ತು ಚೆನ್ನೈ ಸಂಪರ್ಕಿಸುವ ಹೊಸ ರೈಲು ಪ್ರಾರಂಭವಾಗಿದೆ.

ನಿನ್ನೆ (ಭಾನುವಾರ) ರೈಲು ಪ್ರಾರಂಭವಾಗಿದ್ದು, ಸಂಸದ ಬಿ ವೈ ವಿಜಯೇಂದ್ರ ಹಸಿರು ನಿಶಾನೆ ತೋರಿಸವ ಮೂಲಕ ರೈಲಿಗೆ ಚಾಕನೆ ನೀಡಿದರು.

ಈ ಬಳಿಕೆ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯ ಜನರ ಬಹು ದಿನದ ಕನಸು ನನಸಾಗಿದೆ. ಶಿವಮೊಗ್ಗದಿಂದ ತಿರುಪತಿಗೆ ಹೋಗಲು ಇದು ಪ್ರಯೋಜನವಾಗಲಿದೆ. ಇದು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂಪರ್ಕ ಕಲ್ಪಿಸುವುದರಿಂದ ಜನರಿಗೆ ಅನುಕೂಲವಾಗಲಿದೆ. ಹಾಗಾಗಿ ಜಿಲ್ಲೆಯ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

Shivamogga Saaksha Tv

ಇನ್ನೂ ಶಿಕಾರಿಪುರ, ರಾಣೆಬೆನ್ನೂರು ರೈಲ್ವೆ ಹೊಸ ಮಾರ್ಗ ಟೆಂಡರ್ ಮುಂದಿನ ತಿಂಗಳಲ್ಲಿ ಆಗಲಿದೆ. ಈಗಾಗಲೇ ಶೇ. 60ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಮುಗಿದಿದೆ. ವಾರದಲ್ಲಿ ಎರಡು ದಿನಗಳ ಕಾಲ ಈ ರೈಲು ಸಂಚರಿಸಲಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ ನಾರಾಯಣಗೌಡ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್ ರುದ್ರೇಗೌಡ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ಪಂಚಾಯತ್ ಸಿಇಒ ವೈಶಾಲಿ ಹಾಗೂ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd