Mysore | ಪಿಎಫ್ಐ ಜಿಲ್ಲಾ ಮಾಜಿ ಅಧ್ಯಕ್ಷ ಎನ್ ಐಎ ವಶಕ್ಕೆ
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಎನ್‌ಐಎ ದಾಳಿ ನಡೆಸಿದ್ದು, ಪಿಎಫ್ಐ ಸಂಘಟನೆ ಜಿಲ್ಲಾ ಮಾಜಿ ಅಧ್ಯಕ್ಷ ಎನ್‌ಐಎ ವಶಕ್ಕೆ ಪಡೆದುಕೊಂಡಿದೆ.
ಮೌಲಾನ ಮಹ್ಮದ್ ಖಲೀಂ ಉಲ್ಲಾ ಅವರನ್ನು ಎನ್ ಐಎ ವಶಕ್ಕೆ ಪಡೆದುಕೊಂಡಿದೆ.
ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಚೇರಿ ಮತ್ತು ನಾಯಕರ ನಿವಾಸದ ಮೇಲೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿದೆ.
ಬೆಂಗಳೂರು, ಮಂಗಳೂರು, ಕೊಪ್ಪಳ ಸೇರಿದಂತೆ ವಿವಿಧ ಕಡೆ ಎನ್ ಐ ಎ ಅಧಿಕಾರಿಗಳು ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಚೇರಿ ಮತ್ತು ನಾಯಕರ ನಿವಾಸದ ಮೇಲೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿದ್ದಾರೆ.
ಅದರಂತೆ ಮೈಸೂರಿನಲ್ಲಿ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಮೌಲಾನ ಮಹಮ್ಮದ್ ಖಲಿಂ ಉಲ್ಲಾ ಅವರ ನಿವಾಸ ಮೇಲೆ ಮಧ್ಯ ರಾತ್ರಿ 3.30ರ ಸುಮಾರಿಗೆ ದಾಳಿ ನಡೆಸಿದೆ.
ಎಂಟು ಮಂದಿ ಅಧಿಕಾರಿಗಳು 3.30 ರಿಂದ 6 ಗಂಟೆಯವರೆಗೆ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.
ಇದಾದ ಬಳಿಕ ಮೌಲಾನ ಮಹ್ಮದ್ ಖಲೀಂ ಅವರನ್ನು ಪೊಲೀಸರು ಬೆಂಗಳೂರಿಗೆ ಕರೆದೊಯ್ದಿದ್ದಾರೆ.