ಅತಿ ಸುಲಭವಾಗಿ ಮನೆಯಲ್ಲಿ ತಯಾರಿಸಿ ಮೈಸೂರ್ ಪಾಕ್…!

1 min read

ಅತಿ ಸುಲಭವಾಗಿ ಮನೆಯಲ್ಲಿ ತಯಾರಿಸಿ ಮೈಸೂರ್ ಪಾಕ್…!

ರುಚಿಕರ , ಘಮ ಘಮ ಸುವಾಸನೆ ಭರಿತ ಮೈಸೂರು ಪಾಕ್ ತಯಾರಿಸಲು ನಿಮಗೆ ಬೇಕು..

ಸ್ವಲ್ಪ ಪ್ರಮಾಣದಲ್ಲಿ ಮಾಡಲು ಬೇಕಾಗುವಷ್ಟು ಪ್ರಮಾಣ – ಹೆಚ್ಚು ಪ್ರಮಾಣದಲ್ಲಿ ಬೇಕಾದಲ್ಲಿ ಕ್ವಾಂಟಿಯನ್ನ ಡಬಲ್ ಮಾಡಿದರೆ ಆಯ್ತು..

1 ಕಪ್ ತುಪ್ಪ

ಅರ್ಧ ಕಪ್ ಎಣ್ಣೆ
1. 30 ಕಪ್ ಕಡಲೇ ಹಿಟ್ಟು

ಏಲಕ್ಕಿ

ಸಕ್ಕರೆ 2 ಕಪ್

ಅರ್ಧ ಕಪ್ ಅಥವ ಮುಕ್ಕಾಲು ಕಪ್ ನೀರು

ಸ್ವಲ್ಪ ಡ್ರೈ ಪ್ರೂಟ್ಸ್ ಚೂರು ( Optional)

ಮಾಡುವ ವಿಧಾನ : ಮೊದಲಿಗೆ 1 ಕಪ್ ತುಪ್ಪ ಅರ್ಧ ಕಪ್ ಎಣ್ಣೆ ಒಟ್ಟಿಗೆ ಕಾಯಿಸಿ ಪಕ್ಕ ಇಟ್ಟುಕೊಂಡಿರಬೇಕು.. ಇಂದು ಕ್ಯಾಕ್ ಪ್ಯಾನ್ ಅಥವ ಮಿಶ್ರಣ ಹಾಕುವುದಕ್ಕೆ ತಟ್ಟೆಯನ್ನ ತುಪ್ಪದಲ್ಲಿ ಚೆನ್ನಾಗಿ ಸವರಿ ತೆಗೆದು ಇಟ್ಟುಕೊಳ್ಳಿ.. ನಂತರ ಒಂದು ನಾನ್ ಸ್ಟಿಕ್ ಪ್ಯಾನ್ ಗೆ 2 ಕಪ್ ಸಕ್ಕರೆ ಅರ್ಧ ಅಥವ ಮುಕ್ಕಾಲು ಕಪ್ ನೀರು ಹಾಕಿ ಕಲಸಿ ಪಾಕ ತಯಾರಿಸಿ.. ಪಾಕ ತಯಾರಾಗೋವರೆಗೂ ಅದನ್ನ ಸ್ಪೂನಿನ ಸಹಾಯದಿಂದ ಆಡಿಸುತ್ತಿರಬೇಕು.. ಪಾಕ ತಯಾರಾಗಿದ್ಯಾ ಎಂದು ನೋಡಲು ಒಂದು ಸ್ಪೂನ್ ನಲ್ಲಿ ಸ್ವಲ್ಪ ಪಾಕ ತೆಗೆದು ಸ್ವಲ್ಪ ಆರಿಸಿ ನಿನ್ನ ಬೆರಳುಗಳ ಸಹಾಯದಿಂದ ಅದನ್ನ ಮುಟ್ಟಿದಾಗ ಅದು ಒಂದು ಎಳೆ ಬರಬೇಕು.. ಆಗ ಪಾಕ ತಯಾರಾಗಿರುತ್ತೆ..  ಅದನ್ನ ಹಾಗೆಯೇ ಸಣ್ಣ ಉರಿಯಲ್ಲೇ ಬಿಡಿ..

ಮತ್ತೊಂದ್ ಕಡೆ ಮತ್ತೊಂದ್ ಪ್ಯಾನ್ ನಲ್ಲಿ 1. 30 ಕಪ್ ಕಡಲೆಹಿಟ್ಟನ್ನ ಸ್ವಲ್ಪ ತುಪ್ಪದ ಸಹಾಯದಿಂದ ಫ್ರೈ ಮಾಡಿ.. ಸೀಯದಂತೆ ಅದನ್ನ ಆಡಿಸುತ್ತಾ ಸಂಪೂರ್ಣವಾಗಿ ಅದರ ಘಮ ಬರಲು ಶುರುವಾದ ನಂತರ ಅದನ್ನ ನಿಧಾನವಾಗಿ ಸಕ್ಕರೆ ಹಾಕಕ್ಕೆ ಸ್ವಲ್ಪ ಸ್ವಲ್ಪವೇ ಹಾಕುತ್ತಾ ಮತ್ತೊಂದು ಕೈನಲ್ಲಿ ಅದನ್ನ ಗಂಟಿಲ್ಲದಂತೆ  ಅದನ್ನ ತಿರುಗಿಸಬೇಕು..

ನಂತರ ಆ ಮಿಶ್ರಣ ಇನ್ನೇನು ಸ್ವಲ್ಪ ಗಟ್ಟಿಯಾಗ್ತಿದೆ ಅನ್ನೋ ವಾಗ್ಲೇ ಅದಕ್ಕೆ ನಿದಾನವಾಗಿ ಕಾಯಿಸಿಟ್ಟಿದ್ದ ಎಣ್ಣೆ ತುಪ್ಪದ ಮಿಶ್ರಣವನ್ನ ಹಾಕುತ್ತಾ ನಿರಂತರವಾಗಿ ಮಿಕ್ಸ್ ಮಾಡುತ್ತಲೇ ಇರಬೇಕು.. ಈ ಹಂತದಲ್ಲೇ ಏಲಕ್ಕಿ ಪುಡಿ ಹಾಕಿ ಮತ್ತೆ ಮಿಕ್ಸ್ ಮಾಡುತ್ತಲೇ ಇನ್ನೇನು ತೆಳುವಾಗಿದೆ ಅನ್ನೋವಾಗ್ಲೇ ಆ ಮಿಶ್ರಣವನ್ನ ತುಪ್ಪ ಸವರಿಟ್ಟಿದ್ದ ತಟ್ಟೆ ಅಥವ ಪಾತ್ರಗೆ ಸುರಿದುಬಿಡಿ.. ಅದು ಗಟ್ಟಿಯಾಗೋ ಮೊದಲೇ ಚಾಕುವಿನಲ್ಲಿ ಲಘುವಾಗಿ ನಿಮಗೆ ಬೇಕಾದ ಶೇಪ್ ನಲ್ಲಿ ಕಟ್ ಮಾಡಿ ಬಿಟ್ಟುಬಿಡಿ.. ಅದ್ರ ಮೇಲೆ ಬೇಕಾದ್ರೆ ಗೋಡಂಬಿ, ಪಿಸ್ತಾ , ಬಾದಾಮಿ ಚೂರುಗಳನ್ನ ಹಾಕಿ ಬಿಡಿ.. ಸ್ವಲ್ಪ ಆರಿದ ನಂತರ ಕಟ್ ಹಾಕಿದ್ದ ಭಾಗದಲ್ಲೇ ಚಾಕುವಿನಿಂದ ಅದೇ ಶೇಪ್ ನಲ್ಲಿ ಕಟ್ ಮಾಡಿ.. ಮೃದುವಾದ ಮೈಸೂರು ಪಾಕ್ ಸವಿಯಲು ಸಿದ್ಧ..

ರುಚಿಕರ ಅಡುಗೆ ರೆಸಿಪಿಗಳು…!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd