ಪ್ರೇಮಿಗಳ ದಿನದಂದು ನಟಿ ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ವಿಶೇಷ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.
ಸದ್ಯ ಈ ಜೋಡಿ ಇವರಿಬ್ಬರು ‘ತಂಡೇಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ತಂಡೇಲ್ ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ಅಲ್ಲಿನ ಒಂದು ರೋಮ್ಯಾಂಟಿಕ್ ಡೈಲಾಗ್ಗೆ ಈಗ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ರೀಲ್ಸ್ ಮಾಡಿದ್ದಾರೆ. ಅಲ್ಲದೇ, ಅದನ್ನು ಪ್ರೇಮಿಗಳ ದಿನದಂದೇ ಹಂಚಿಕೊಂಡಿದ್ದಾರೆ.
ಸದ್ಯ ಈ ವಿಡಿಯೋ 6 ಲಕ್ಷಕ್ಕೂ ಅಧಿಕ ಲೈಕ್ ಪಡೆದಿದ್ದು, ಬೇರೆ ಬೇರೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಅಣ್ಣಾ ನೀವು ಸಾಯಿ ಪಲ್ಲವಿ ಅವರನ್ನೇ ಮದುವೆ ಆಗಿ. ಅವರು ನಿಮಗೆ ತುಂಬ ಚೆನ್ನಾಗಿ ಜೋಡಿಯಾಗುತ್ತಾರೆ ಸೇರಿದಂತೆ ಬಗೆ ಬಗೆಯ ಕಮೆಂಟ್ ಮಾಡಿ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.








