ನಾಳೆ ರೈತರ ಹೋರಾಟಕ್ಕೆ ಬೆಂಬಲವಾಗಿ ರಾಜಭವನ ಚಲೋ
ಬೆಂಗಳೂರು : ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರಿಗೆ ಬೆಂಬಲವಾಗಿ ನಾಳೆ ರಾಜಭವನ ಚಲೋ ನಡೆಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ತಮ್ಮ ನಿವಾಸದ ಬಳಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾಳೆ ನಾವು ರೈತರಿಗೆ ಬೆಂಬಲ ವ್ಯಕ್ತಪಡಿಸಿ ರಾಜಭವನ ಚಲೋ ನಡೆಸುತ್ತೇವೆ.
ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಂದು ಅಲ್ಲಿಂದ ಎಲ್ಲಾ ವಾಹನಗಳು ಫ್ರೀಡಂ ಪಾರ್ಕ್ ಗೆ ಬರಬೇಕು. ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರುತ್ತಾರೆ ಎಂದು ತಿಳಿಸಿದರು.
ಇನ್ನ ಕೇಂದ್ರ ಸರ್ಕಾರದ ವಿರುದ್ಧ ನಾವು ನಡೆಸುತ್ತಿರುವ ಬೃಹತ್ ಹೋರಾಟ ಇದಾಗಿದೆ.
ರಾಜ್ಯದಲ್ಲಿ ಮೂರು ಕರಾಳ ಕಾನೂನು ಹಾಗೂ ಕೊರೊನಾ ಸಂದರ್ಭದಲ್ಲಿ ನೀಡಿದ ಮಾತಿಗೆ ತಪ್ಪಿರುವ ಹಿನ್ನೆಲೆ ಹೋರಾಟ ಮಾಡುತ್ತೇವೆ.
ಇದಕ್ಕೆ ಪೊಲೀಸರ ಜೊತೆ ಮಾತನಾಡುತ್ತಿದ್ದು, ಸಹಕಾರ ಸಿಗುವ ನಿರೀಕ್ಷೆಯಿದೆ ಎಂದು ಡಿಕೆಶಿ ಹೇಳಿದರು.
ಬೆಳಗಾವಿ ವಿಚಾರವಾಗಿ ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಟ್ವೀಟ್ ಕುರಿತು ಮಾತನಾಡಿದ ಟ್ರಬಲ್ ಶೂಟರ್, ಮಹಾರಾಷ್ಟ್ರ ಸಿಎಂ ಮಾತಾಡಿರುವುದನ್ನು ನಾನು ಖಂಡಿಸುತ್ತೇನೆ.
ರಾಜ್ಯ ರಚನೆಯಾದಾಗಲೇ ಗಡಿ ನಿರ್ಧಾರವಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಸರ್ಕಾರ ಮರಾಠ ಪ್ರಾಧಿಕಾರ ರಚನೆ ಮಾಡಿದ್ದೇ ಇದೆಲ್ಲದಕ್ಕೂ ಕಾರಣ ಎಂದು ಆರೋಪಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









