ಬ್ರಹ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ ಸಂಸದ ನಳಿನ್ ಕುಮಾರ್ ಕಟೀಲ್

1 min read
Nalin Kumar Kateel

ಬ್ರಹ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ ಸಂಸದ ನಳಿನ್ ಕುಮಾರ್ ಕಟೀಲ್

ಉಳ್ಳಾಲ, ಮಾರ್ಚ್03: ಉಳ್ಳಾಲದ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಅವರು ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಂಸದ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ‘ಬ್ರಹ್ಮಶ್ರೀ’ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದರು.
Nalin Kumar Kateel

ತೊಕ್ಕೊಟು ಬಳಿ ವೇದಿಕೆ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ‘ಮೆರುಗು 2021’ ನಲ್ಲಿ ನಳಿನ್ ಕುಮಾರ್ ಕಟೀಲ್, ನಾನು ಬ್ರಹ್ಮಶ್ರೀ ಪ್ರಶಸ್ತಿಯನ್ನು ಪಡೆಯಲು ಅರ್ಹನಲ್ಲ. ಇದು ದೊಡ್ಡ ಗೌರವ. ರಾಜಕೀಯದಲ್ಲಿ ಜನಾರ್ದನ ಪೂಜಾರಿ ಅವರು ಪ್ರಾಮಾಣಿಕತೆಗೆ   ಹೆಸರುವಾಸಿಯಾಗಿದ್ದಾರೆ. ನಾನು ಅವರ ಮಟ್ಟವನ್ನು ತಲುಪಿಲ್ಲ. ರಾಜಕೀಯ ಜೀವನದಲ್ಲಿ ನಾನು ಹೆಚ್ಚು ಸಾಧನೆ ಮಾಡಿಲ್ಲ. ಪೂಜಾರಿಯವರಷ್ಟು ಎತ್ತರಕ್ಕೆ ಬೆಳೆಯಲು ಬಹಳಷ್ಟು ‌ವರ್ಷಗಳು ಬೇಕು ಎಂದು ಹೇಳಿದರು.
nalinkumar kateel

ನಳಿನ್ ಕುಮಾರ್ ಕಟೀಲ್ ಅವರಿ‌ಗೆ ಬ್ರಹ್ಮಶ್ರೀ ಪ್ರಶಸ್ತಿಯನ್ನು ನೀಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಪ್ರಶಸ್ತಿಯ ಹಿಂದಿನ ಕಾರಣ ಮತ್ತು ತರ್ಕವನ್ನು ಸಹ ಅನೇಕರು ಪ್ರಶ್ನಿಸಿದ್ದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd