ನೀವು ಮಲಗಿ… ಸರಕಾರ ಮೇಕೆದಾಟು ಯೋಜನೆ ಬಗ್ಗೆ ಕಾರ್ಯಪ್ರೌರುತ್ತವಾಗಿದೆ : ಕಟೀಲ್ nalin kumar kateel tweet reaction on congress mekedatu padayatre
ಬೆಂಗಳೂರು : ತಾವು ಅಧಿಕಾರದಲ್ಲಿದ್ದಾಗ 5 ವರ್ಷ ಮೇಕೆದಾಟು ಎಲ್ಲಿದೆ ಎಂದು ನೋಡದ ಸಿದ್ದರಾಮಯ್ಯನವರೇ, ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರೇ ಆಗ ಮಲಗಿ ಈಗ ಚುನಾವಣೆಗೆ ನಿಮ್ಮ ಅಸ್ತಿತ್ವ ತೋರಿಸಲು ನಿದ್ದೆಯಿಂದ ಎದ್ದಿದ್ದಿರಿ.ಭಾಜಪಾ ಸರಕಾರ ಈ ಯೋಜನೆ ಬಗ್ಗೆ ಕಾರ್ಯಪ್ರವೃತ್ತವಾಗಿದೆ. ನೀವು ಮಲಗಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ನಳಿನ್ ಕುಮಾರ್ ಕಟೀಲ್, ಮೇಕೆದಾಟು ಯೋಜನೆಗೆ ಕರ್ನಾಟಕದ ಭಾಜಪಾ ಸರಕಾರ ಬದ್ಧವಾಗಿದೆ ಎಂದು ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವಿನ ರಾಜಕೀಯ ಪ್ರತಿಷ್ಟೆಯ ಮೇಲಾಟದಲ್ಲಿ ಪಾದಯಾತ್ರೆಯ ಕ್ರೆಡಿಟ್ ತೆಗೆದುಕೊಳ್ಳಲು ಸ್ಪರ್ಧೆ ಬಿಟ್ಟರೆ ಬೇರೆನೂ ಇಲ್ಲ.
ತಾವು ಅಧಿಕಾರದಲ್ಲಿದ್ದಾಗ 5 ವರ್ಷ ಮೇಕೆದಾಟು ಎಲ್ಲಿದೆ ಎಂದು ನೋಡದ @siddaramaiah ನವರೇ, ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಜಲಸಂಪನ್ಮೂಲ ಸಚಿವರಾಗಿದ್ದ @DKShivakumar ಅವರೇ ಆಗ ಮಲಗಿ ಈಗ ಚುನಾವಣೆಗೆ ನಿಮ್ಮ ಅಸ್ತಿತ್ವ ತೋರಿಸಲು ನಿದ್ದೆಯಿಂದ ಎದ್ದಿದ್ದಿರಿ.
ಭಾಜಪಾ ಸರಕಾರ ಈ ಯೋಜನೆ ಬಗ್ಗೆ ಕಾರ್ಯಪ್ರವೃತ್ತವಾಗಿದೆ. ನೀವು ಮಲಗಿ.— Nalinkumar Kateel (@nalinkateel) January 9, 2022
ನಮ್ಮ ನೀರು ನಮ್ಮ ಹಕ್ಕು ಎನ್ನುವ ಬದ್ಧತೆ ನಮ್ಮದು. ಈ ಯೋಜನೆ ಅನುಷ್ಟಾನಗೊಳಿಸಲು ಡಿ.ಕೆ.ಶಿವಕುಮಾರ್ ಅವರ ಗೆಳೆಯ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅಡ್ಡಗಾಲು ಹಾಕಿದ್ದಾರೆ. ತಮಿಳುನಾಡಿನಲ್ಲಿ ಮಗುವನ್ನು ಚಿವುಟಿ ಕರ್ನಾಟದಲ್ಲಿ ತೊಟ್ಟಿಲು ತೂಗುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಇದು ಜನರಿಗೆ ತಿಳಿಯಲ್ಲ ಎನ್ನುವ ಭ್ರಮೆಯಲ್ಲಿದ್ದಾರೆ.
ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಕೆದಾಟು ವಿಷಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ವಿಚಾರಣೆಯಲ್ಲಿದೆ. ತಾವು ವಕೀಲರೆಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರೇ ಯಾವುದೇ ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ಏನು ಮಾಡಬೇಕು ಎಂದು ಜನರಿಗೆ ತಿಳಿಸುವಿರಾ ಅಥವಾ ಪಾದಯಾತ್ರೆ ಮಾಡಿ ಮೈಲೇಜ್ ಪಡೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಸ್ಪರ್ಧೆಗೆ ಬೀಳುತ್ತೀರಾ ಎಂದು ಪ್ರಶ್ನಿಸಿದ್ದಾರೆ.








