ನಾರಾಯಣ ಗುರು ಹೆಸರು ಬಳಸಿಕೊಂಡು ರಾಜಕೀಯ : ಸಿದ್ದು ವಿರುದ್ಧ ಸುನಿಲ್ ಕುಮಾರ್ ಕಿಡಿ

1 min read
siddaramaiah vs sunil kumar Saaksha tv

ನಾರಾಯಣ ಗುರು ಹೆಸರು ಬಳಸಿಕೊಂಡು ರಾಜಕೀಯ : ಸಿದ್ದು ವಿರುದ್ಧ ಸುನಿಲ್ ಕುಮಾರ್ ಕಿಡಿ

ಬೆಂಗಳೂರು : ನಾರಾಯಣ ಗುರುಗಳ ಹೆಸರನ್ನು ಬಳಸಿಕೊಂಡು ಕೇವಲ ರಾಜಕೀಯ ಮಾಡುತ್ತಿದ್ದಾರೆ. ಈ ಹಿಂದೆ ಕೇರಳ ಸರ್ಕಾರ ನಾರಾಯಣ ಗುರುಗಳನ್ನು ಶಿಲುಬೆಗೆ ಏರಿಸಿದ ಸ್ತಬ್ದ ಚಿತ್ರ ತಯಾರಿಸಿದಾಗ ಸಿದ್ದರಾಮಯ್ಯ ಏಕೆ ಮೌನಕ್ಕೆ ಶರಣಾಗಿದ್ದರು. ಇದು ಅಕ್ಷಮ್ಯ ಅಪರಾಧವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧದ ಸಚಿವ ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.

ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ರಾಜ್ಯದ ಸಚಿವರಾದ ಸುನಿಲ್ ಕುಮಾರ್ ಮತ್ತು ಕೋಟ ಶ್ರೀನಿವಾಸ ಪೂಜಾರಿ ಮತ್ತು  ಬಿಜೆಪಿ ನಾಯಕರು ತರಹೇವಾರಿ ಹೇಳಿಕೆಗಳ ಮೂಲಕ ಬಿಜೆಪಿ ಎನ್ನುವುದು ಸುಳ್ಳುಗಳ ಕಾರ್ಖಾನೆ ಎಂದು ಸಾಬೀತುಪಡಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಗಳ ಮೂಲಕ ಟೀಕೆ ಮಾಡಿದ್ದರು.

ಇದಕ್ಕೆ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿರುವ ಸುನಿಲ್ ಕುಮಾರ್, ನಾರಾಯಣ ಗುರುಗಳ ಹೆಸರನ್ನು ಬಳಸಿಕೊಂಡು ಕೇವಲ ರಾಜಕೀಯ ಮಾಡುತ್ತಿದ್ದಾರೆ. ಈ ಹಿಂದೆ ಕೇರಳ ಸರ್ಕಾರ ನಾರಾಯಣ ಗುರುಗಳನ್ನು ಶಿಲುಬೆಗೆ ಏರಿಸಿದ ಸ್ತಬ್ದ ಚಿತ್ರ ತಯಾರಿಸಿದಾಗ ಸಿದ್ದರಾಮಯ್ಯ ಏಕೆ ಮೌನಕ್ಕೆ ಶರಣಾಗಿದ್ದರು. ಇದು ಅಕ್ಷಮ್ಯ ಅಪರಾಧವಾಗಿದೆ.

ತಮ್ಮ  ಆಡಳಿತಾವಧಿಯಲ್ಲಿ ಟಿಪ್ಪು ಸುಲ್ತಾನರ ಸ್ತಬ್ದ ಚಿತ್ರವನ್ನು ಗಣರಾಜ್ಯೋತ್ಸವ ಪರೇಡ್ ಗೆ ಕಳುಹಿಸಿದ್ದ ಸಿದ್ದರಾಮಯ್ಯನವರಿಗೆ, ಈಗ ನಾರಾಯಣ ಗುರುಗಳ ನೆನಪಾಗಿದೆ. ಆಗ ಟಿಪ್ಪು ಸುಲ್ತಾನ್ ಬದಲು ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ಸಿದ್ದರಾಮಯ್ಯ ಸರ್ಕಾರ ಏಕೆ ಕಳುಹಿಸಲಿಲ್ಲ ಎಂದು ಪ್ರಶ್ನಿಸಿದೆ.

ಹಿಂದೂಗಳ ಬಗ್ಗೆ ಒಂದೇ ಕಣ್ಣಿನಲ್ಲಿ ಕಣ್ಣೀರು ಸುರಿಸಿ, ಅಮಾಯಕರನ್ನು ಬಲಿ ಪಡೆದ ನಿಮ್ಮ ಮಕರ ನೀತಿಯನ್ನು ರಾಜ್ಯದ ಜನತೆ ನೋಡಿದೆ. ನಿಮಗೆ ಮಹಾನ್ ಪುರುಷರ ಆದರ್ಶಗಳು ಪಾಲನೆಗೆ ಬೇಕಿಲ್ಲ. ಬದಲಿಗೆ ಅವರನ್ನ ಬಳಸಿಕೊಂಡು ಹೇಗೆ ಸ್ವಸ್ಥ ಸಮಾಜದಲ್ಲಿ ಅಶಾಂತಿ ಮೂಡಿಸಬೇಕೆಂಬುದನ್ನೇ ಸದಾ ಯೋಚಿಸುತ್ತಿರುತ್ತಿರಿ.

ನಾರಾಯಣ ಗುರುಗಳ ಆದರ್ಶಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅತೀವವಾದ ಕಾಳಜಿಯಿದೆ. ಕೇರಳಕ್ಕೆ ಭೇಟಿ ನೀಡಿದಾಗ ಅವರ ಆಶ್ರಮಕ್ಕೂ ಸಹ ಭೇಟಿ ನೀಡಿದ್ದಾರೆ. ಅಲ್ಲದೇ ಆಶ್ರಮದ ಗುರುಗಳ ಸಮಾಜ ಸೇವೆ ಅರಿತು ಪದ್ಮಶ್ರೀ ಪ್ರಶಸ್ತಿಯನ್ನು ಸಹ ನೀಡಿದ್ದಾರೆ. ವಸುಧೈವ ಕುಟುಂಬಕಂ ಎನ್ನುವ ನಾರಾಯಣ ಗುರುಗಳ ಆದರ್ಶವನ್ನು ಆಡಳಿತದಲ್ಲಿ ಪಾಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd