Narendra modi : 6ನೇ ವಂದೇ ಭಾರತ್ ಎಕ್ಸಪ್ರೆಸ್ ಮತ್ತು ನಾಗ್ಪುರ ಮೆಟ್ರೋಗೆ ಚಾಲನೆ….
ಹಲವು ಯೋಜನೆಗಳ ಉದ್ಘಾಟನೆಯ ಭಾಗವಾಗಿ ಮಹಾರಾಷ್ಟ್ರದ ನಾಗ್ಪುರ ತಲುಪಿರುವ ಪ್ರಧಾನಿ ನರೇಂದ್ರ ಮೋದಿ , ದೇಶಿಯಾವಾಗಿ ತಯಾರಿಸಿರುವ ಭಾರತದ ಅತ್ಯಂತ ವೇಗದ ರೈಲು ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಚಾಲನೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮಹಾರಾಷ್ಟ್ರದ ನಾಗ್ಪುರ ರೈಲು ನಿಲ್ದಾಣದಿಂದ ದೇಶದ 6 ನೇ ಹೊಸ ತಲೆಮಾರಿನ ವಂದೇ ಭಾರತ್ ರೈಲಿಗೆ ಫ್ಲ್ಯಾಗ್ ಆಫ್ ಮಾಡಿದರು. ಇದಲ್ಲದೆ ನಾಗ್ಪುರ ಮೆಟ್ರೋ ರೈಲು ಯೋಜನೆಯ ಮೊದಲ ಹಂತವನ್ನ ಪ್ರಧಾನಿ ಮೋದಿ ಉದ್ಘಾಟಿಸಿ, ವಿದ್ಯಾರ್ಥಿಗಳೊಂದಿಗೆ ರೈಲಿನಲ್ಲಿ ಸವಾರಿ ಮಾಡಿದ್ದಾರೆ.
ಮೊದಲ ಹಂತದ ಮೆಟ್ರೋ ಉದ್ಘಾಟನೆಯ ನಂತರ ಎರಡನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಝೀರೋ ಮೈಲ್ ಫ್ರೀಡಂ ಪಾರ್ಕ್ ಮತ್ತು ಖಾಪ್ರಿ ನಿಲ್ದಾಣಗಳ ನಡುವೆ ಪ್ರಧಾನಿ ಮೆಟ್ರೋ ರೈಲಿನಲ್ಲಿ ಸವಾರಿ ಮಾಡಿದರು. ಮೊದಲ ಹಂತದ ಮೆಟ್ರೋ ಯೋಜನೆಯಲ್ಲಿ 36 ನಿಲ್ದಾಣಗಳಿವೆ. 40 ಕಿ ಮೀ ದೂರವನ್ನ ಕ್ರಮಿಸಿಲಿದೆ. 8,650 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಗ್ಪುರದಲ್ಲಿ 520 ಕಿಮೀ ಉದ್ದದ ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್ ಹೆದ್ದಾರಿಯ ಮೊದಲ ಹಂತವನ್ನ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು. ಇಲ್ಲಿ ಡೋಲು ಬಾರಿಸುವ ಮೂಲಕ ಮೋದಿ ಅವರನ್ನ ಸ್ವಾಗತಿಸಲಾಯಿತು. ಮೋದಿ ಸಹ ಕಲಾವಿದರೊಡನೆ ಕೂಡಿ ಕೆಲ ಕಾಲ ಡೋಲು ಬಾರಿಸಿದರು.
Narendra modi : Launch of 6th Vande Bharat Express and Nagpur Metro….