Narendra Modi : ಅಮ್ಮನ ಮರಣದ ನೋವಿನ ನಡುವೆಯೂ ಕರ್ತವ್ಯ ನಿರ್ವಹಿಸಿದ ಪ್ರಧಾನಿ….
ತಾಯಿಯ ಮರಣದ ನಂತರ ಪುತ್ರನ ಜವಬ್ದಾರಿ ನಿರ್ವಹಿಸಿದ ಪ್ರಧಾನಿಯವರು, ಮೊದಲ ನಿರ್ಧರಿಸಿದ್ದ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇಶದ ಪ್ರಧಾನಿಯಾಗಿಯೂ ತನ್ನ ಜವಬ್ದಾರಿಗಳನ್ನ ಪೂರೈಸಿದ್ದಾರೆ.
ತಾಯಿಯ ಶವ ಯಾತ್ರಯಲ್ಲಿ ಹೆಗಲುಕೊಟ್ಟು ಸಾಗಿದ್ದ ಪ್ರಧಾನಿಯವರು ಅಂತಿಮ ವಿಧಿ ವಿಧಾನಗಳನ್ನ ಪೂರೈಸಿದ ನಂತರ, ದುಖಃ ಮನದಲ್ಲಿಟ್ಟುಕೊಂಡೆ ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಹೌರಾ ಮತ್ತು ನ್ಯೂ ಜಲ್ಪೈಗುರಿ ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿವ ಮೂಲಕ ಕರ್ತವ್ಯ ಪ್ರಜ್ಞೆ ಮೆರದಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು; ತಮ್ಮ ತಾಯಿಯನ್ನು ಕಳೆದುಕೊಂಡ ದುಃಖದ ನಡುವೆಯೂ ಕಾರ್ಯಕ್ರಮಕ್ಕೆ ಬಂದಿದ್ದಕ್ಕಾಗಿ ಪ್ರಧಾನಿಯವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ. “ಪಶ್ಚಿಮ ಬಂಗಾಳದ ಜನರ ಪರವಾಗಿ, ಈ ಅವಕಾಶಕ್ಕಾಗಿ ತುಂಬಾ ಧನ್ಯವಾದಗಳು. ಇಂದು ನಿಮಗೆ ತುಂಬಾ ದುಃಖದ ದಿನ. ನಿಮ್ಮ ತಾಯಿ ನಮಗೂ ತಾಯಿ ನಿಮ್ಮ ಈ ಸೇವೆಯನ್ನ ಮುಂದುವರೆಸಲು ದೇವರು ನಿಮಗೆ ಶಕ್ತಿ ನೀಡಲಿ ದಯವಿಟ್ಟು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ’ ಎಂದು ದೀದಿ ಹೇಳಿದರು.
ಮಗನಾಗಿ ನಿಮ್ಮ ಜವಾಬ್ದಾರಿಯನ್ನು ಪೂರೈಸುವುದು ಮಾತ್ರವಲ್ಲದೆ ಪ್ರಧಾನಿಯಾಗಿಯೂ ನಿಮ್ಮ ಕೆಲಸವನ್ನು ಮಾಡುತ್ತಿರುವಿರಿ ದಯವಿಟ್ಟು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ ಎಂದು ದೀದಿ ಹೇಳಿದರು. ಮಮತಾ ಬ್ಯಾನರ್ಜಿ ಮಾತಿಗೆ ಪ್ರಧಾನಿ ಮೋದಿ ಭಾವುಕರಾದರು. ಮಮತಾ ಬ್ಯಾನರ್ಜಿಯವರ ಮಾತುಗಳು ಪ್ರಧಾನಿಯವರನ್ನ ಕಲಕಿತು.
ಈ ನಡುವೆ ಪಶ್ಚಿಮ ಬಂಗಾಳದ ಹೌರಾ ಮತ್ತು ನ್ಯೂ ಜಲ್ಪೈಗುರಿ ನಡುವೆ ಚಲಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನ ಪ್ರಧಾನಿ ವಾಸ್ತವಿಕವಾಗಿ ಉದ್ಘಾಟಿಸಿದರು. ರಾಜ್ಯಪಾಲ ಸಿವಿ ಆನಂದ್ ಬೋಸ್ ಮತ್ತು ರೈಲ್ವೇ ಸಚಿವ ಅಶ್ವನಿ ವೈಷ್ಣವ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Narendra Modi: The Prime Minister who performed his duty despite the pain of his mother’s death…