ಮಡಿಕೇರಿ: ಕೊಡಗು ಜಿಲ್ಲೆ ಡರ್ಟ್ ಟ್ರಾಕ್, ಆಫ್ ರೋಡ್, ಕೇಸರುಗದ್ದೆ ಕ್ರೀಡೆ, ಕೈಲ್ ಮುಹೂರ್ತ ಸೇರಿದಂತೆ ಕ್ರೀಡೆಗಳಿಗೆ ಜಿಲ್ಲೆ ರಾಜ್ಯದಲ್ಲಿಯೇ ತುಂಬಾನೇ ಫೇಮಸ್.
ಇಷ್ಟೆಲ್ಲಾ ಕ್ರೀಡೆಗಳ ತವರು ಕೊಡಗಿನಲ್ಲಿ ಯುವ ಸಾಹಸ ಪ್ರತಿಭೆಗಳಿಗೆ ಅವಕಾಶ ಸಿಗದೆ, ಇತರೆ ಜಿಲ್ಲೆ-ರಾಜ್ಯಗಳತ್ತ ಗುಳೆ ಹೋಗುತ್ತಿದ್ದಾರೆ. ಇದರ ಬೆನ್ನಲ್ಲೇ ಸುಂಟಿಕೊಪ್ಪದ ಯುವ ಬೈಕ್ ರೈಡರ್ ಧನುಷ್ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿದ್ದಾನೆ.

ಎಂಆರ್‍ಎಫ್ ನ್ಯಾಷನಲ್ ಬೈಕ್ ರ್ಯಾಲಿ ಚಾಂಪಿಯನಶಿಪ್ ನಲ್ಲಿ ಎರಡನೇ ಸ್ಥಾನ ಪಡೆದು ಧನುಷ್ ಇತಿಹಾಸ ಬರೆದಿದ್ದಾನೆ. ಕೊಡಗಿನ ಭಾಗದಿಂದ ಚಾಂಪಿಯನಶಿಪ್ ಸ್ಪರ್ಧೆಯಲ್ಲಿ ಭಾಗವಹಿದ್ದ ಏಕೈಕ ರೇಸ್ ಪಟುವಾಗಿದ್ದು ಧನುಷ್, ಪುತ್ತೂರಿನಲ್ಲಿ ನಡೆದಿದ್ದ ಅರ್ಹತಾ ಸುತ್ತಿನಲ್ಲಿ ಆಯ್ಕೆಯಾಗಿದ್ದ. ಬಳಿಕ ಬೆಂಗಳೂರಿನ ನಡೆದ ರೇಸ್ ನಲ್ಲಿ 21 ವರ್ಷದ ಧನುಷ್ ಎರಡನೇ ಸ್ಥಾನ ಪಡೆದು ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಮಗನ ಸಾಧನೆ ಕಂಡು ಪೋಷಕರಾದ ರೇಖಾ ಮತ್ತು ದಿಲೀಪ್ ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








