ನವಾಜ್ ಶರೀಫ್ ಪುತ್ರಿ ಇದ್ದ ಕೋಣೆಯ ಬಾತ್ ರೂಂನಲ್ಲಿ ಕ್ಯಾಮೆರಾ
ಇಸ್ಲಾಮಾಬಾದ್ : ತಾವು ಜೈಲಿನಲ್ಲಿದ್ದ ವೇಳೆ ಇಮ್ರಾನ್ ಸರ್ಕಾರ ತಮ್ಮ ಕೋಣೆ ಮತ್ತು ಬಾತ್ ರೂಮಿನಲ್ಲಿ ಕ್ಯಾಮೆರಾ ಅಳವಡಿಸಿತ್ತು ಎಂದು ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಪುತ್ರಿ ಮರಿಯಮ್ ನವಾಜ್ ಗಂಭೀರ ಆರೋಪ ಮಾಡಿದ್ದಾರೆ.
ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡುತ್ತ ತಾವು ಜೈಲಿನಲ್ಲಿ ಎದುರಿಸಿದ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾರೆ.
ಸಂದರ್ಶನದಲ್ಲಿ ಮರಿಯಮ್, ಇಮ್ರಾನ್ ಸರ್ಕಾರ ಮಹಿಳೆಯನ್ನ ಅವಮಾನಿಸಿದೆ. ನಾನು ಜೈಲಿನ ಮಹಿಳೆಯರ ಹೇಗೆ ನಡೆದುಕೊಳ್ಳಲಾಗುತ್ತೆ ಎಂಬ ಸತ್ಯ ಹೇಳಿದ್ರೆ ಆಡಳಿತದಲ್ಲಿರೋರಿಗೆ ಮುಖ ತೋರಿಸೋದಕ್ಕೆ ಆಗಲ್ಲ.
ಬಿಡೆನ್ ಕೊವಿಡ್ ಟಾಸ್ಕ್‌ಫೋರ್ಸ್‌ಗೆ ಭಾರತ ಮೂಲದ ಸೆಲೈನ್ ನೇಮಕ
ಪಾಕಿಸ್ತಾನದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ತಂದೆಯ ಮುಂದೆಯೇ ಆತನ ಮಗಳನ್ನ ಬಂಧಿಸಿ ಆಕೆಯ ಮೇಲೆ ಬಲ ಪ್ರಯೋಗಿಸುವ ಸರ್ಕಾರವಿದು. ರಾಜಕೀಯವಾಗಿ ನನ್ನನ್ನು ಬಲಹೀನಗೊಳಿಸಲು ನನ್ನನ್ನು ಅರೆಸ್ಟ್ ಮಾಡಿಸಿದ್ದರು ಎಂದು ಮೆರಿಯಮ್ ಆರೋಪಿಸಿದ್ದಾರೆ.
ಚೌಧರಿ ಶುಗರ್ ಮಿಲ್ ಪ್ರಕರಣದಲ್ಲಿ ಮರಿಯಮ್ ಅವರ ಬಂಧನವಾಗಿತ್ತು. ಇಮ್ರಾನ್ ಖಾನ್ ಅವಧಿಯಲ್ಲಿ ಮರಿಯಮ್ ಎರಡು ಬಾರಿ ಜೈಲು ಶಿಕ್ಷೆ ಅನುಭವಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel