11 ರಾಜ್ಯಗಳಲ್ಲಿ NIA ದಾಳಿ –106 PFI ಕಾರ್ಯಕರ್ತರ ಬಂಧನ…
ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನ ಬೆಂಬಲಿಸಿದ ಆರೋಪದಲ್ಲಿ ಸುಮಾರು 11 ರಾಜ್ಯಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದಾಳಿ ಮಾಡಿದ್ದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ(PFI) 106 ಕಾರ್ಯಕರ್ತರನ್ನ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳ (22) ಮಹಾರಾಷ್ಟ್ರ ಮತ್ತು ಕರ್ನಾಟಕ (ತಲಾ 20), ಹೆಚ್ಚು ಬಂಧನ ನಡೆಸಲಾಗಿದ್ದು. ಆಂಧ್ರಪ್ರದೇಶ (5), ಅಸ್ಸಾಂ (9), ದೆಹಲಿ (3), ಮಧ್ಯಪ್ರದೇಶ (4), ಪುದುಚೇರಿ (3), ತಮಿಳು ನಾಡು (10), ಉತ್ತರ ಪ್ರದೇಶ (8) ಮತ್ತು ರಾಜಸ್ಥಾನ (2) PFI ಕಾರ್ಯಕರ್ತರನ್ನ ಬಂಧಿಸಲಾಗಿದೆ.
ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ನಡೆಯುತ್ತಿರುವ ಈ ದಾಳಿಗಳನ್ನು ಎನ್ಐಎ “ಇಲ್ಲಿಯವರೆಗೆ” “ಅತಿದೊಡ್ಡ” ತನಿಖಾ ಪ್ರಕ್ರಿಯೆ ಎಂದು ಕರೆಯಲಾಗಿದೆ.
ಭಯೋತ್ಪಾದನೆ ನಿಧಿ, ತರಬೇತಿ ಶಿಬಿರಗಳನ್ನು ಆಯೋಜಿಸುವುದು ಮತ್ತು ಜನರನ್ನ ನಿಷೇಧಿತ ಸಂಘಟನೆಗಳಿಗೆ ಸೇರಲು ತೊಡಗಿಸಿಕೊಂಡಿರುವ ವ್ಯಕ್ತಿಗಳ ಹುಡುಕಾಟದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಎನ್ಐಎ ತಿಳಿಸಿದೆ.
ಬಂಧಿತ ಕಾರ್ಯಕರ್ತರ ವಿವರಗಳು ತಕ್ಷಣವೇ ಲಭ್ಯವಿಲ್ಲ, ಆದರೆ ಎನ್ಐಎ, ಜಾರಿ ನಿರ್ದೇಶನಾಲಯ (ಇಡಿ) ಮತ್ತು ಇದುವರೆಗೆ 11 ರಾಜ್ಯಗಳ ಪೊಲೀಸ್ ಪಡೆಗಳಿಂದ ಬಂಧನಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Karnataka | PFI and SDPI workers protest against NIA raid in Mangaluru
NIA is conducting searches at multiple locations in various states pic.twitter.com/4Pl2Tj8oar
— ANI (@ANI) September 22, 2022
PFI ಈ ಕುರಿತು ಹೇಳಿಕೆ ನೀಡಿದ್ದು, “ತನ್ನ ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ನಾಯಕರ ಮನೆಗಳ ಮೇಲೆ ದಾಳಿಗಳು ನಡೆಯುತ್ತಿವೆ. ರಾಜ್ಯ ಸಮಿತಿ ಕಚೇರಿಯ ಮೇಲೂ ದಾಳಿ ನಡೆಸಲಾಗುತ್ತಿದೆ. ಭಿನ್ನಾಭಿಪ್ರಾಯದ ಧ್ವನಿಗಳನ್ನು ಅಡಗಿಸಲು ಏಜೆನ್ಸಿಗಳನ್ನು ಬಳಸಿಕೊಳ್ಳುವ ಫ್ಯಾಸಿಸ್ಟ್ ಆಡಳಿತದ ಕ್ರಮಗಳನ್ನು ನಾವು ಬಲವಾಗಿ ಪ್ರತಿಭಟಿಸುತ್ತೇವೆ.”
ಮಂಗಳೂರು ಮತ್ತು ಬೆಂಗಳೂರಿನಲ್ಲೂ ಶೋಧ ಕಾರ್ಯ ನಡೆಯತ್ತಿದ್ದು, ಶೋಧ ಕಾರ್ಯವನ್ನ ಖಂಡಿಸಿ ಮಂಗಳೂರಿನಲ್ಲಿ PFI ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ರಿಚ್ ಮಂಡ್ ಟೌನ್ ಅಪಾರ್ಟ್ ಮೆಂಟ್ ಒಂದರಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಗುತ್ತಿದೆ.