ರೈಲು ಮಾರ್ಗದ ಮೂಲಕ ಭಾರತಕ್ಕೆ ಪ್ರವೇಶಿಸಲು ವಿದೇಶಗರಿಗೆ ಅನುಮತಿ ನಿರಾಕರಿಸಿದ ನೇಪಾಳ..!
ಇತ್ತೀಚಿಗೆ ಪ್ರಾರಂಭವಾದ ಕುರ್ತಾ–ಜಯನಗರ ರೈಲು ಮಾರ್ಗದ ಮೂಲಕ ಭಾರತಕ್ಕೆ ತೆರಳಲು ವಿದೇಶಿ ಪ್ರಜೆಗಳಿಗೆ ನೇಪಾಳ ಸರ್ಕಾರ ಅನುಮತಿ ನಿರಾಕರಿಸಿದೆ..
ಭದ್ರತೆಯ ದೃಷ್ಟಿಯಿಂದ ನೇಪಾಳ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರೋದಾಗಿ ವರದಿಯಾಗಿದೆ.. ಗಡಿಯಾಚೆಗಿನ ರೈಲ್ವೆ ಕಾಮಗಾರಿಗಾಗಿ ಅನುಸರಿಸಬೇಕಾದ ಕಾರ್ಯ ವಿಧಾನಗಳನ್ನು ಅಂತಿಮಗೊಳಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆಯ ಮಹಾನಿರ್ದೇಶಕ ದೀಪಕ್ ಕುಮಾರ್ ಭಟ್ಟರಾಯ್ ಹೇಳಿರುವುದಾಗಿ ಕಠ್ಮಂಡು ಪೋಸ್ಟ್ ಪತ್ರಿಕೆಯಲ್ಲಿ ವರದಿಯಾಗಿದೆ.
ಭಾರತವು ಎಸ್‌ಪಿಎ ಅನ್ನು ಅಂತಿಮಗೊಳಿಸಲು ತಡಮಾಡಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭಟ್ಟರಾಯ್ ಹೇಳಿರೋದಾಗಿಯು ತಿಳಿದುಬಂದಿದೆ.