ವಿಶ್ವಕಪ್ ಟೂರ್ನಿಯಲ್ಲಿ ಇಂದು ನಡೆದ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಅಲ್ಲದೇ, ಕ್ರಿಕೆಟ್ ದೇವರ ಸಾಧನೆಯನ್ನು ಕಿಂಗ್ ಕೊಹ್ಲಿ ಸರಿಗಟ್ಟಿದ್ದಾರೆ. ಆದರೆ, ನಿಧಾನವಾಗಿ ಆಡಿದ ಕೊಹ್ಲಿ ವಿರುದ್ಧ ನೆಟ್ಟಿಗರು ಗರಂ ಆಗಿ ಸ್ವಾರ್ಥಿ ಎಂದು ಆರೋಪ ಮಾಡಿದ್ದಾರೆ.
ಇಂದು ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜಾ ಅವರ ಅದ್ಭುತ ಫಾರ್ಮ್ ನಿಂದಾಗಿ ಭಾರತ ಐತಿಹಾಸಿಕ ಜಯ ಸಾಧಿಸಿದೆ. ಆದರೆ, ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪಾಳಯದಲ್ಲಿ ಕಿಂಗ್ ಕೊಹ್ಲಿ ದಾಖಲೆಯ 49 ಏಕದಿನ ಶತಕ ದಾಖಲಿಸಿ, ಸಚಿನ್ ದಾಖಲೆ ಸರಿಗಟ್ಟಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ 49 ನೇ ಶತಕದಿಂದ ವಂಚಿತರಾಗಿದ್ದ ವಿರಾಟ್, ದಕ್ಷಿಣ ಆಫ್ರಿಕಾ ವಿರುದ್ಧ ಮೈಲುಗಲ್ಲು ಸಾಧಿಸಿದ್ದಾರೆ. ಆದರೆ, ಕೊಹ್ಲಿ ಸ್ವಾರ್ಥಿ ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ಬಂದಿದೆ. ಕೊಹ್ಲಿ ತಮ್ಮ ದಾಖಲೆಯ ಶತಕಕ್ಕಾಗಿ ಆಮೆ ಗತಿಯ ಬ್ಯಾಟಿಂಗ್ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಭಾರತ ಮೊದಲ 10 ಓವರ್ಗಳಲ್ಲಿ 91 ರನ್ ಕಲೆಹಾಕಿತ್ತು. ಆರಂಭಿಕರು ಔಟಾದ ಬಳಿಕ ತಂಡದ ರನ್ರೇಟ್ ದಿಢೀರ್ ಕುಸಿಯುತ. ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ನಿದಾನಗತಿಯ ಬ್ಯಾಟಿಂಗ್ಗೆ ಮುಂದಾದರು. ಇಬ್ಬರೂ ಅರ್ಧಶತಕದ ಇನ್ನಿಂಗ್ಸ್ ಆಡುವುದರೊಂದಿಗೆ 134 ರನ್ ಕಾಣಿಕೆ ನೀಡಿದರು.
ಆನಂತರ ಇಬ್ಬರೂ ಜೋರಾಗಿ ಬ್ಯಾಟ್ ಬೀಸಲು ಮುಂದಾಗಿ, ಶ್ರೇಯಸ್ ಔಟ್ ಆದರು. ರಾಹುಲ್ ಹೆಚ್ಚು ಪರಿಣಾಮ ಬೀರಲಿಲ್ಲ. ಸೂರ್ಯಕುಮಾರ್ ಯಾದವ್ ಬೌಂಡರಿ ಬಾರಿಸುವ ಮೂಲಕ ತಂಡದ ಮೊತ್ತಕ್ಕೆ ವೇಗ ನೀಡಿದರು. ಇನ್ನೊಂದೆಡೆ ಕೊಹ್ಲಿ ಮಾತ್ರ ಸಿಂಗಲ್ಸ್ಗಳ ಮೊರೆ ಹೋದರು. ಕೊನೆಗೆ ಜಡೇಜಾ ಸ್ಫೋಟಕ ಆಟಕ್ಕೆ ಮುಂದಾದರೂ ಶತಕದಂಚಿನಲ್ಲಿದ್ದ ಕೊಹ್ಲಿಯ ನಿಧಾನಗತಿಯಲ್ಲಿಯೇ ಇದ್ದರು. 49ನೇ ಓವರ್ನಲ್ಲಿ ತಮ್ಮ ದಾಖಲೆಯ ಶತಕ ಪೂರೈಸಿದರು. ಹೀಗಾಗಿ ಕೊಹ್ಲಿಯ ಈ ನಿದಾನಗತಿಯ ಬ್ಯಾಟಿಂಗ್ ನೋಡಿದ ನೆಟ್ಟಿಗರು ಕೊಹ್ಲಿ, ಶತಕ ಬಾರಿಸುವುದಕ್ಕಾಗಿಯೇ ಸ್ವಾರ್ಥತನ ಮೆರೆದಿದ್ದಾರೆ. ಹೀಗಾಗಿ ನಿಧಾನವಾಗಿ ಆಡಿದ್ದಾರೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ. ಕೊಹ್ಲಿ ಈ ಪಂದ್ಯದಲ್ಲಿ 121 ಎಸೆತಗಳನ್ನು ಎದುರಿಸಿ 10 ಬೌಂಡರಿಗಳ ನೆರವಿನಿಂದ ಅಜೇಯ 101 ರನ್ ಸಿಡಿಸಿದ್ದಾರೆ.