ವಿಶ್ವದಾದ್ಯಂತ ಭಯಭೀತ ವಾತಾವರಣ ಹುಟ್ಟು ಹಾಕಿರುವ ಕೊರೋನಾ ವೈರಸ್ ಸೋಂಕು ಚಿಕಿತ್ಸೆಗಾಗಿ ಔಷಧಗಳು ಇಷ್ಟರಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ತಿಳಿಸಿದ್ದಾರೆ.
ಕೊರೋನಾ ವೈರಸ್ ಲಸಿಕೆಗಳು ಈ ವರ್ಷದ ಅಗಸ್ಟ್ ನಂತರ ಅಥವಾ ಮುಂದಿನ ವರ್ಷದ ಆರಂಭದ ಸಮಯದಲ್ಲಿ ಮಾರುಕಟ್ಟೆಗೆ ಬರಬಹುದು ಎಂದು ವಾಷಿಂಗ್ಟನ್ ನಲ್ಲಿ ಮೈಕ್ ಪೆನ್ಸ್ ಹೇಳಿದ್ದಾರೆ. ಮೆಡೆರ್ನಾ ಎಂಬ ಅಮೆರಿಕದ ಔಷಧ ತಯಾರಿಕಾ ಕಂಪನಿ ಕೊರೋನಾ ವೈರಸ್ ಗೆ ಲಸಿಕೆ ಕಂಡು ಹಿಡಿದಿರುವುದಾಗಿ ಘೋಷಿಸಿದೆ.
ಸದ್ಯಕ್ಕೆ ಅಮೆರಿಕದಲ್ಲಿ ದಾಖಲಾಗಿರುವ ಕೊರೋನಾ ವೈರಸ್ ಪೀಡಿತರ ಚಿಕಿತ್ಸೆಗೆ ಅಮೆರಿಕದ ಔಷಧ ಕಂಪನಿಯಾದ ಗಿಲೀಡ್ ನಿಂದ ಪ್ಲೂ ಮುಂತಾದ ಜ್ವರ ಶೀತ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ರೆಮ್ ಡಿಸಿವಿರ್ ಎಂಬ ಔಷಧಿಯನ್ನು ಉಪಯೋಗಿಸಲಾಗುತ್ತಿದೆ. ಇದುವರೆಗೆ ಅಮೆರಿಕದಲ್ಲಿ ಮಾರಕ ಕೊರೋನಾ ವೈರಸ್ ಗೆ 6 ಮಂದಿ ಮೃತರಾಗಿದ್ದಾರೆ.
ಪಾಕಿಸ್ತಾನದಲ್ಲಿ ಭೀಕರ ಗುಂಡಿನ ದಾಳಿ: 50 ಮಂದಿ ಸಾವು
ಪಾಕಿಸ್ತಾನದ ಖೈಬರ್ ಪಖ್ತೂನ್ವಾ ಪ್ರಾಂತ್ಯದಲ್ಲಿ ಬಂದೂಕುಧಾರಿಗಳು ಪ್ರಯಾಣಿಕ ವಾಹನಗಳ ಮೇಲೆ ಗುಂಡು ಹಾರಿಸಿದ ಘಟನೆ ಸಂಭವಿಸಿದೆ. ಬಂದೂಕುಧಾರಿಗಳ ಗುಂಡಿನ ದಾಳಿಯಲ್ಲಿ 50 ಮಂದಿ ಮೃತಪಟ್ಟಿದ್ದು, 29 ಮಂದಿ...