ಚಿಕ್ಕಬಳ್ಳಾಪುರ : ಅನುಮಾನಾಸ್ಪದ ರೀತಿಯಲ್ಲಿ ನವವಿವಾಹಿತೆ ಸಾವನ್ನಪ್ಪಿರುವ ಘಟನೆಯೊಂದು ಜಿಲ್ಲೆಯ (Chikkaballapur City) ಕಾರ್ಖಾನೆ ಪೇಟೆಯಲ್ಲಿ ನಡೆದಿದೆ.
ನವ ವಿವಾಹಿತೆ ತೇಜಸ್ವಿನಿ (20) ಸಾವನ್ನಪ್ಪಿದ ಗೃಹಿಣಿ. ಕೊಠಡಿಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಸಾವಿಗೆ ಪತಿ ಲೋಹಿತ್ ನಿಂದ ವರದಕ್ಷಿಣೆ (Dowry) ಕಿರುಕುಳವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಮೃತ ತೇಜಸ್ವಿನಿ ತಂದೆ ಮಂಜುನಾಥ್ ಆಕ್ರಂದನ ಮುಗಿಲು ಮುಟ್ಟಿಟ್ಟು. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಸಿಪಿಐ ರಾಜು ಹಾಗೂ ತಹಶೀಲ್ದಾರ್ ಗಣಪತಿ ಶಾಸ್ತ್ರೀ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಲೋಹಿತ್ ಹಾಗೂ ಅವರ ಸಹೋದರ ಗೋಪಿ ವಿರುದ್ಧ ದೂರು ದಾಖಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.








