ರೋಮ್ಯಾಂಟಿಕ್ ಹಾಡಿಗೆ ಪತ್ನಿ ಜೊತೆ ಹೆಜ್ಜೆ ಹಾಕಿದ ನಿಖಿಲ್..!
ಬೆಂಗಳೂರು: ಸ್ಯಾಂಡಲ್ ವುಡ್ ನಟ ಹಾಗೂ ಯುವ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಸದ್ಯ ರೈಡರ್ ಸಿನಿಮಾ ರಿಲೀಸ್ ಗಾಗಿ ಕಾಯ್ತಿದ್ದಾರೆ.. ಅಲ್ಲದೇ ಇತ್ತೀಚೆಗೆ ತಂದೆಯಾದ ಸಂಭ್ರಮವೂ ಅವರ ಕುಟುಂಬದಲ್ಲಿದೆ.. ಈ ನಡುವೆ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಪತ್ನಿ ರೇವತಿ ಜೊತೆಗೆ ರೊಮ್ಯಾಂಟಿಕ್ ಹಾಡಿಗೆ ರೋಮ್ಯಾಂಟಿಕ್ ಸ್ಟೆಪ್ ಹಾಕಿ ಈ ವಿಡಿಯೋವನ್ನ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.. ಅವರ ವಿಡಿಯೋ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾ ನಾನಾ ಕಮೆಂಟ್ ಗಳನ್ನ ಮಾಡ್ತಿದ್ದಾರೆ..
ಸಿನಿಮಾ ಹಾಗೂ ರಾಜಕೀಯ ಎರಡು ಕ್ಷೇತ್ರಗಳಲ್ಲಿ ಬ್ಯುಸಿಯಾಗಿದ್ದರೂ ನಿಖಿಲ್ ಕುಮಾರಸ್ವಾಮಿ ತಮ್ಮ ಪತ್ನಿಗೂ ಸಹ ಅಷ್ಟೇ ಟೈಮ್ ನೀಡುತ್ತಾರೆ. ಆಗಾಗ ಪತ್ನಿ ಜೊತೆಗೆ ಕಾಲ ಕಳೆಯುತ್ತಿರುವ ಫೋಟೋ ಹಾಗೂ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ..