ನಿರ್ಭಯಾ ಅತ್ಯಾಚಾರ ಪ್ರಕರಣದ ದೋಷಿಗಳು ಇಲ್ಲಿಯವರೆಗೆ ಶಿಕ್ಷೆ ಯಿಂದ ತಪ್ಪಿಸಿಕೊಳ್ಳಲು ದಿನಕ್ಕೊಂದು ನಾಟಕವಾಡಿ, ತಮ್ಮ ಬತ್ತಳಿಕೆಯಲ್ಲಿದ್ದ ಎಲ್ಲಾ ಆಸ್ತ್ರಗಳು ಮುಗಿಯಿತು ಎಂದು ಗೊತ್ತಾಗುತ್ತಿದ್ದಂತೆ, ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ರಾಷ್ಟ್ರಪತಿ, ಹೈಕೋರ್ಟ್, ಸುಪ್ರೀಂ ಕೋರ್ಟ್ ಎಂದು ದಿನಕ್ಕೊಂದು ಮನವಿಪತ್ರ, ಕ್ಯುರೇಟಿವ್ ಅರ್ಜಿ ಸಲ್ಲಿಸಿ ಕೊನೆಗೆ ಸುಪ್ರೀಂಕೋರ್ಟ್ ನಿಂದ ಕಾನೂನಿನ ಎಲ್ಲಾ ಹೋರಾಟದ ಬಾಗಿಲುಗಳು ಮುಚ್ಚಿದೆ, ಶಿಕ್ಷೆಗೆ ತಯಾರಾಗಿ ಎಂಬ ಸೂಚನೆ ಬರುತ್ತಿದ್ದಂತೆ, ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ದೆಹಲಿ ನ್ಯಾಯಾಲಯ ಮಾರ್ಚ್ 20ರಂದು ಬೆಳಗ್ಗೆ 5.30ಕ್ಕೆ ಗಲ್ಲಿಗೇರಿಸಲು ಆದೇಶಿಸಿದ್ದು, ಅಕ್ಷಯ್ ಸಿಂಗ್, ಪವನ್ ಗುಪ್ತಾ ಹಾಗೂ ವಿನಯ್ ಶರ್ಮಾ ಅವರು ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಸೋಮವಾರ ಬೆಳಗ್ಗೆಯಷ್ಟೇ ಗಲ್ಲು ಶಿಕ್ಷೆಗೊಳಗಾಗಿರುವ ಅಪರಾಧಿಗಳಲ್ಲಿ ಒಬ್ಬನಾದ ಮುಖೇಶ್ ಸಿಂಗ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ನ್ಯಾಯಾಧೀಶ ಅರುಣ್ ಮಿಶ್ರಾ ಹಾಗೂ ಎಂ.ಆರ್.ಶಾ ಅವರಿದ್ದ ಪೀಠ ಅರ್ಜಿಯ ವಿಚಾರಣೆ ನಡೆಸಿ, ಈ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದು ಹೇಳಿ ತಿರಸ್ಕರಿಸಿತ್ತು. ಗಲ್ಲುಶಿಕ್ಷೆಯನ್ನು ಮತ್ತೊಮ್ಮೆ ತಡೆಹಿಡಿಯಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ವರದಿಗಳ ಪ್ರಕಾರ ಸನ್ನಿವೇಶಗಳ ಪ್ರಕಾರ ಎಲ್ಲಾ ಕಾನೂನು ಅವಕಾಶ ಬಳಸಿಕೊಂಡಿದ್ದೀರಿ. ಇನ್ಯಾವುದೇ ಅವಕಾಶಗಳು ಬಾಕಿ ಉಳಿದಿಲ್ಲ. ನಿನಗೆ(ಮುಖೇಶ್ ಸಿಂಗ್) ಕ್ಷಮಾದಾನ ಅರ್ಜಿ ಸಲ್ಲಿಸಲು ಅವಕಾಶ ದೊರಕಿದೆ. ಅದು ವಜಾಗೊಂಡಿದೆ. ಕ್ಯೂರೇಟಿವ್ ಅರ್ಜಿ ಕೂಡಾ ವಜಾಗೊಂಡಿದೆ. ಇನ್ನೇನು ಅವಕಾಶ ಉಳಿದಿದೆ ಎಂದು ಸುಪ್ರೀಂಕೋರ್ಟ್ ಕೇಳಿರುವುದಾಗಿ ತಿಳಿದು ಬಂದಿದೆ.
ಮುಖೇಶ್ ವಕೀಲ ಎಂಎಲ್ ಶರ್ಮಾ ಮೂಲಕ ಅರ್ಜಿ ಸಲ್ಲಿಸಿದ್ದ. ಪ್ರಕರಣದ ಆ್ಯಮಿಕಸ್ ಕ್ಯೂರಿ ಗ್ರೋವರ್, ದಿಲ್ಲಿ ಸರ್ಕಾರ, ಕೇಂದ್ರ ಸರ್ಕಾರ ಕ್ರಿಮಿನಲ್ ಸಂಚು ನಡೆಸಿದ್ದು ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿದ್ದ.
ನ್ಯಾಯಾಧೀಶರು ಅರ್ಜಿಯಲ್ಲಿ ಮಾಡಲಾದ ಸಹಿ ಕುರಿತು ಪ್ರಶ್ನಿಸಿದ್ದು, ಮುಖೇಶ್ ಅಫಿಡೆವಿಟ್‍ನಲ್ಲಿ ಆತ ಸಹಿ ಮಾಡಿಲ್ಲ. ಬದಲಿಗೆ ಆತನ ಸಹೋದರ ಸುರೇಶ್ ಅರ್ಜಿಗೆ ಸಹಿ ಮಾಡಿದ್ದಾನೆ. ನೀವು ಸಲ್ಲಿಸಿದ ಅರ್ಜಿಗೆ ಸುರೇಶ್ ಹೇಗೆ ಸಹಿ ಮಾಡಿದ, ಜೈಲಿನಲ್ಲಿ ಏನಾಯಿತು ಎಂಬುದು ಅವನಿಗೆ ಹೇಗೆ ಗೊತ್ತಾಯಿತು? ಇದು ಮುಖೇಶ್‍ಗೆ ತಿಳಿದಿಲ್ಲವೆಂದು ಅವನಿಗೆ ಹೇಗೆ ಗೊತ್ತಾಯಿತು ಎಂದು ಪ್ರಶ್ನಿಸಿದರು. ಮುಖೇಶ್ ಪರವಾಗಿ ಆತ ಮಾತನಾಡಲು ಸಾಧ್ಯವಿಲ್ಲ. ಏಕೆಂದರೆ ಇದು ಮುಖೇಶ್ ಸಲ್ಲಿಸಿದ್ದ ಅರ್ಜಿ. ಈ ಅರ್ಜಿಯನ್ನು ನೀವೇ ಹಿಂಪಡೆಯುತ್ತಿರೋ ಅಥವಾ ನಾವೇ ವಜಾ ಮಾಡಬೇಕೇ ಎಂದು ನ್ಯಾಯಾಧೀಶ ಅರುಣ್ ಮಿಶ್ರಾ ದೋಷಿಗಳ ಪರ ವಕೀಲ ಶರ್ಮಾ ಅವರನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ಮುಖೇಶ್ ಪರ ವಕೀಲ ಶರ್ಮಾ ಅವರನ್ನು ಈ ನ್ಯಾಯಾಲಯದ ವಕೀಲರ ವಿರುದ್ಧ ವಂಚನೆಯ ಗಂಭೀರ ಆರೋಪ ಮಾಡುತ್ತಿದ್ದೀರಿ. ನಿಮ್ಮ ಜ್ಞಾನದ ಮೂಲ ಯಾವುದು? ಜೈಲಿನಲ್ಲಿ ಏನಾಯಿತು ಎಂಬ ವೈಯಕ್ತಿಕ ವಿಚಾರ ಸುರೇಶ್‍ಗೆ ಹೇಗೆ ಗೊತ್ತಾಯಿತು ಎಂದು ಪ್ರಶ್ನಿಸಿರುವುದಾಗಿ ವರದಿಗಳು ತಿಳಿಸಿವೆ.
ವಕೀಲರ ವಿರುದ್ಧ ವಂಚನೆಯ ಗಂಭೀರ ಆರೋಪದ ಕುರಿತು ದ್ವಿಸದಸ್ಯರ ಪೀಠ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಮುಖೇಶ್ ಪರ ವಕೀಲ ಎಂ.ಎಲ್.ಶರ್ಮಾ ಅವರು ಅರ್ಜಿಯನ್ನು ಹಿಂಪಡೆಯುವಂತೆ ಮುಖೇಶ್ ಗೆ ಸೂಚಿಸಿದ್ದು, ಆತ ಅರ್ಜಿಯನ್ನು ಹಿಂಪಡೆದಿದ್ದ. ಇದೀಗ ನಿರ್ಭಯಾ ಅತ್ಯಾಚಾರಿಗಳ ಎಲ್ಲಾ ಅರ್ಜಿಗಳು ತಿರಸ್ಕತವಾಗಿರುವ ಹಿನ್ನೆಲೆಯಲ್ಲಿ, ತಮ್ಮ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಅವರು ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಅಯೋಗ್ಯ ಪಾಕ್ ಗೆ ಆಂಗ್ ಭಂಗ್ ಯೋಗ..
ಆಪರೇಷನ್ ಸಿಂಧೂರ... ಈ ರಣಬೇಟೆ..ಪಾಕಿಸ್ತಾನದ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತೆ ಮಾಡ್ಬಿಟ್ಟಿದೆ.. ತಮ್ಮದು ಕೆಚ್ಚೆದೆ.. ಕೆಚ್ಚೆದೆ ಅಂತಿದ್ದವರ ಗುಂಡಿಗೆ ಗಢಗಢನೇ ಅಲ್ಲಾಡಿ ಹೋಗಿದೆ... ಹೃದಯ ಒಂದ್ಸಾರಿ.. ಬಲಕ್ಕೆ ಓಡಿ...








