ಬಾಲಿವುಡ್ ನಟ ಸುಶಾಂತ್ ಸಾವಿನ ನಂತರ ಹಲವಾರು ಚರ್ಚೆಗಳು ತಾರಕಕ್ಕೇರಿವೆ. ಅಲ್ದೇ ಇದು ಆತ್ಮಹತ್ಯೆ ಅಲ್ಲ ಸುಶಾಂತ್ ರದ್ದು ನಿಯೋಜಿತ ಕೊಲೆ ಎನ್ನುವ ಮಾತುಗಳು ಬಿಟೌನ್ ನಲ್ಲಿ ವ್ಯಾಪಕವಾಗಿ ಸದ್ದು ಮಾಡ್ತಿದೆ. ಇನ್ನೂ ಇತ್ತೀಚೆಗಷ್ಟೇ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಸಹ ಈ ವಿಚಾರವಾಗಿ ಮಾತನಾಡಿದ್ದು, ಸುಸಾಂತ್ ರ ಸಾವಿನ ಹಿಂದೆ ಹಲವು ದೊಡ್ಡ ಮಂದಿಯ ಕೈವಾಡವಿದೆ. ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಬೇಂದು ಪ್ರಧಾನಿ ಮೋದಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದರು. ಇದು ಸುಶಾಂತ್ ರ ಅಭಿಮಾನಿಗಳ ಹೋರಾಟಕ್ಕೆ ಬಲ ತುಂಬಿತ್ತು. ಇದೀಗ ನಿರ್ಭಯಾ ಅತ್ಯಾಚಾರಿಗಳನ್ನು ನೇಣಿಗೇರಿಸಲು ಸತತ 7 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿ ವಿಜಯ ಸಾಧಿಸಿದ್ದ ವಕೀಲೆ ಸೀಮಾ ಕುಶ್ವಾಹ ಸಹ ಈ ಹೋರಾಟದಲ್ಲಿ ಅಖಾಡಕ್ಕಿಳಿದಿದ್ದಾರೆ.
ಸುಶಾಂತ್ ರದ್ದು ಆತ್ಮಹತ್ಯೆ ಅಲ್ಲ. ಅವರ ಸಾವಿನ ಹಿಂದೆ ಬೇರೆ ಯಾವುದೋ ಸಂಚು ನಡೆದಿರುವ ಸಾಧ್ಯತೆಯಿದೆ ಎಂದು ಅನುಮಾನ ವ್ಯಕ್ತಪಡಿಸಿರುವ ಸೀಮಾ ಅವರು ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ಸುಶಾಂತ್ ರ ಸಾವಿನ ಹಿಂದಿನ ಅಸಲಿ ಕಾರಣ ತಿಳಿಯುವ ಹಕ್ಕು ಪ್ರತಿಯೊಬ್ಬ ಭಾರತೀಯರಿಗೂ ಇದೆ. ಆದರೇ ಈಗಾಗಲೇ ಒಂದು ತಿಂಗಳಿಗೂ ಹೆಚ್ಚು ಸಮಯ ಕಳೆದಿದ್ದರೂ ಪೊಲೀಸರು ಸತ್ಯವನ್ನು ಬಹಿರಂಗ ಪಡಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಿ ಎಂದು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. 
ದೇಶವನ್ನು ಪ್ರೀತಿಸುವುದು ಅಂಧಭಕ್ತಿಯಾದರೆ ನಾನು ಅಂಧಭಕ್ತೆ: ನಟಿ ಇಶಾ ಕೊಪ್ಪಿಕರ್ ಖಡಕ್ ಪೋಸ್ಟ್
ಮುಂಬೈ: ಕನ್ನಡದ 'ಸೂರ್ಯವಂಶ' ಸೇರಿದಂತೆ ಬಹುಭಾಷಾ ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿರುವ ಖ್ಯಾತ ನಟಿ ಇಶಾ ಕೊಪ್ಪಿಕರ್ ಇದೀಗ ತಮ್ಮ ಸಾಮಾಜಿಕ ಜಾಲತಾಣದ ವೀಡಿಯೊ ಮೂಲಕ ಭಾರಿ...








